ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾನಸ ಗಂಗೋತ್ರಿ ಪೂರ್ವ ಪ್ರಾಥಮಿಕ ಶಾಲೆಯ ಏಳನೆಯ ವಾರ್ಷಿಕ ಸ್ನೇಹ ಸಮ್ಮೇಳನ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣಸಗೇರಾ ಶ್ರೀ ಮಹರ್ಷಿ ವಾಲ್ಮೀಕಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿ ಮಾನಸ ಗಂಗೋತ್ರಿ ಪೂರ್ವ ಪ್ರಾಥಮಿಕ ಶಾಲೆಯ ಏಳನೆಯ ವಾರ್ಷಿಕ ಸ್ನೇಹ ಸಮ್ಮೇಳನವು ದಿ. 28-2-2026 ರ ಶನಿವಾರ ಸಾಯಂಕಾಲ 6:00ಗೆ ಜರುಗಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಯಮನೂರಪ್ಪ ಯಮನಪ್ಪ ತಳವಾರ ಸಂಸ್ಥೆಯ ಅಧ್ಯಕ್ಷರು ಹಾಗೂ ದಿವ್ಯ ಸಾನಿಧ್ಯವನ್ನು ಗ್ರಾಮ ದೇವತೆ ಅರ್ಚಕರಾದ ಶ್ರೀ ಯುತ ಶಂಕ್ರಪ್ಪ ಬಡಿಗೇರ, ದಳಪತಿಯವರಾದ ಗೋವಿಂದಗೌಡ ಮಾಲಿಪಾಟೀಲ, ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ರಮೇಶ್ ಆಡಿನ, ಉಪಾಧ್ಯಕ್ಷರಾದ ಮರಿಯಪ್ಪ ಕಲಾದಗಿ, ಗ್ರಾಮ ಪಂಚಾಯತಿಯ ಸದಸ್ಯರಾದ ಸಣ್ಣ ದೊಡ್ಡನಗೌಡ ಮಾಲಿ ಪಾಟೀಲ, ಕ್ಯಾದಗುಪ್ಪ ಗ್ರಾಮದ ಬಾಲಪ್ಪ ಉಪ್ಪಾರ, ಮಲಕಾಜಗೌಡ ಪಾಟೀಲ, ಊರಿನ ಶಿಕ್ಷಣ ಪ್ರೇಮಿಗಳಾದ ಎಂ ಎಸ್ ಪಾಟೀಲ್, ದೊಡ್ಡನಗೌಡ ಮಾಲಿಪಾಟೀಲ್, ಹನುಮಂತಪ್ಪ ಹುನಗುಂದ, ಹನುಮಗೌಡ ಭರಮ ಗೌಡ ಮಾಲಿಪಾಟೀಲ ಶೇಖರಪ್ಪ ಮೇಟಿ,
ಆಕ್ಟಿವ್ ಕಿಡ್ಸ್ ಶಾಲೆಯ ಅಧ್ಯಕ್ಷರಾದ ಶರಣು ಎನ್ ನೀಲಿ, ಮಹಾಂತೇಶ ಹಳ್ಳೂರ, ಮಂಜುನಾಥ್ ಬೈಲಗುಡ್ಡ ಭಾಗವಹಿಸಿದ್ದರು.

ವಿಶೇಷವಾಗಿ ಸುತ್ತಮುತ್ತಲಿನ ಗ್ರಾಮಗಳ ಆಶಾ ಕಾರ್ಯಕರ್ತೆಯರಾದ ಶ್ರೀಮತಿ ತಾರಾಬಾಯಿ ಮುತ್ತಪ್ಪ ರಾಥೋಡ, ಶ್ರೀಮತಿ ಕಾವೇರಿ ನಿಡಗುಂದಿಮಠ, ಶ್ರೀಮತಿ ಮಾಬೂಬಿ ನಬಿಸಾಬ್ ಕಲಾಲ್ ಬಂಡಿ, ಭರಮಮ್ಮ ಮುತ್ತಪ್ಪ ಗುಗ್ಗರಿ ಇವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರಾಮಕೃಷ್ಣ ಮಲ್ಲಪ್ಪ ಕಾಲವಾಡ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಕಾರ್ಯಕ್ರಮ ಮುಗಿದ ನಂತರ ಮಕ್ಕಳಿಂದ ಮನರಂಜನೆಯ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!