ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಧರ್ಮ ಸೌಹಾರ್ದದ ಇಫ್ತಾರ್ ಕೂಟ, ಏಕತೆಯ ಸಂದೇಶ ಸಾರಿದ ಮುಸ್ಲಿಂ ಬಾಂಧವರು

ಬಳ್ಳಾರಿ / ಕಂಪ್ಲಿ : ಪಟ್ಟಣದ ಬಿಎಸ್‌ವೈ ಗಾರ್ಡನ್‌ನಲ್ಲಿ ಜಮಾತೆ ಇಸ್ಲಾಮೀ ಹಿಂದ್ ಆಯೋಜಿಸಿದ್ದ ಸರ್ವಧರ್ಮಿಯ ಇಫ್ತಾರ್ ಕೂಟದ ಜಾಗೃತಿ ಸಭೆ ಭಾನುವಾರ ಸಂಜೆ ನಡೆಯಿತು.
ಇಲಕಲ್‌ನ ನಿವೃತ್ತ ಶಿಕ್ಷಕ ಕಂದಗಲ್ ಲಾಲ್‌ಹುಸೇನ್ ಸಾಬ್ ಮಾತನಾಡಿ, ಇಸ್ಲಾಮ್ ಅನುಯಾಯಿಗಳಿಗೆ ರಂಜಾನ್ ಕಡ್ಡಾಯಗೊಳಿಸಿದೆ. ರಂಜಾನ್ ಪುಣ್ಯದಿನಗಳಾಗಿದ್ದು ಉಪವಾಸ ಇರುವನೊಂದಿಗೆ ಉಪವಾಸ ಇಲ್ಲದವನೊಂದಿಗೆ ಆಹಾರ ಸ್ವೀಕರಿಸಿದಲ್ಲಿ ಉಪವಾಸ ಆಚರಿಸದವನಿಗೂ ಉಪವಾಸ ಆಚರಿಸಿದ ಪುಣ್ಯಪ್ರಾಪ್ತಿಯಾಗುತ್ತದೆ. ಮಕ್ಕಳು ಹಿರಿಯರನ್ನು ಅನುಸರಿಸಿದಂತೆ ಹಿರಿಯರ ಆದರ್ಶ ತತ್ವಗಳನ್ನು ಮಕ್ಕಳು ಅನುಕರಿಸುತ್ತಾರೆ. ಹಿರಿಯರು ಸಂಸ್ಕಾರವಂತರಾದರೆ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಪಂಂಚೇಂದ್ರಿಯಗಳನ್ನು ನಿಯಂತ್ರಿಸುವುದು ರಂಜಾನ್ ಆಚರಿಸಲು ಕಾರಣವಾಗಿದೆ. ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ, ಮೋಸ, ವಂಚನೆ, ದುರಾಸೆಗಳಿಗೆ ದೇವಭಯ ಇಲ್ಲದಿರುವುದು ಮುಖ್ಯ ಕಾರಣವಾಗಿದೆ. ಮಾನವೀಯತೆ ಬೆಳಗಲು ದೇವಭಯ ಅಗತ್ಯವಿದೆ. ಪಂಚೆಂದ್ರಿಯಗಳನ್ನು ಜೀವನದಲ್ಲಿ ನಿಯಂತ್ರಿಸುವುದೇ ರಂಜಾನ್ ಮುಖ್ಯ ಉದ್ದೇಶವಾಗಿದೆ. ಕುರಾನ್ ಕೇವಲ ಮುಸ್ಲಿಮರ ಧರ್ಮಗ್ರಂಥ ಆಗಿರದೆ ಸಮಸ್ತ ಮನುಕುಲದ ಉದ್ಧಾರದ ಗ್ರಂಥವಾಗಿದೆ. ಮನುಷ್ಯ ಮನುಷ್ಯತ್ವವನ್ನು ಮರೆತ ಫಲವಾಗಿ ಅನಾಚಾರಗಳು ನಡೆಯುತ್ತಿವೆ. ಪ್ರತಿ ಪಾಪ ಪುಣ್ಯಕ್ಕೆ ಲೆಕ್ಕಗಳಿದ್ದು ದೇವನಿಗೆ ಒಪ್ಪಿಸಬೇಕಿದೆ ಎಂದರು.
ಸೈಯ್ಯದ್ ಷಾಹ್ ಅಬ್ದುಲ್ ವಾಹೀದ್ ಖಾದ್ರಿ ಸಾಹೇಬ್,
ಸೈಯ್ಯದ್ ಷಾಹ್ ಕರಿಮುಲ್ಲಾಖಾದ್ರಿ, ಎಚ್.ವೀರಾಪುರದ ಜ್ಞಾನಜ್ಯೋತಿ ಶಿವಮಂದಿರದ ಜಡೇಶತಾತ ಸಾನ್ನಿಧ್ಯವಹಿಸಿದ್ದರು.
ಜಮಾಅತೆ ಇಸ್ಲಾಮೀ ಹಿಂದ್ ಸಂಚಾಲಕ ವಾಸೀಮ್ ಫಯಾಜ್ ಅಧ್ಯಕ್ಷತೆ ವಹಿಸಿದ್ದರು. ಜಮಾಅತೆಯ ಜಿಲ್ಲಾ ಸಂಚಾಲಕ ಡಾ.ಸೈಯ್ಯದ್ ಜೈನುಲ್ಲಾ ಅಬುದಿನ್‌ಖಾದ್ರಿ, ಜಿಲ್ಲಾ ಉಪಾಧ್ಯಕ್ಷೆ ನೂರ್‌ಜಹಾ ಸಾಹೀಬಾ, ವಲಯ ಅಧ್ಯಕ್ಷ ಅನ್ವರ್‌ಬಾಷ ಉಮ್ರಿ, ಪ್ರಮುಖರಾದ ಎನ್.ಹಬೀಬ್ ರೆಹಮಾನ್, ಕೆ.ಎಸ್.ಚಾಂದ್‌ಭಾಷ, ನೌಷಾದ್‌ಅಹ್ಮದ್ ಹಾಫೀಜ್, ಅತಾವುಲ್ಲಾ ರೆಹಮಾನ್, ಕೆ.ಮಸ್ತಾನ್, ಎಸ್.ಕೆ.ಇಂತಿಯಾಜ್, ಅಹ್ಮದ್, ಖಲಂದರ್, ಸಾಧಿಕ್, ಪಾಸ್ಟರ್ ಪಾಲ್‌ಪಂಪಾಪತಿ, ಪ್ರಮುಖರಾದ ಶಾಂತಿಲಾಲ್ ಸಿಂಘ್ವಿ, ಶಾಂತಿಲಾಲ್ ಬಾಲಾರ್, ಪಿ.ನಾಗೇಶ್ವರರಾವ್, ಷಣ್ಮುಖಪ್ಪ ಚಿತ್ರಗಾರ, ಕೆ.ಎಂ.ಹೇಮಯ್ಯಸ್ವಾಮಿ, ನೀರಗಂಟಿ ವೀರೇಶ್, ಎಲ್.ರಾಘವೇಂದ್ರ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!