ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರೇಣುಕಾಚಾರ್ಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಿ : ಕೆ.ಎಂ. ಬಸವರಾಜಶಾಸ್ತ್ರಿ.

ಬಳ್ಳಾರಿ / ಕಂಪ್ಲಿ : ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ಮಹಾನೀಯರ ಜಯಂತ್ಯುತ್ಸವಗಳು ಕೇವಲ ಆಚರಣೆಗೆ ಸೀಮಿತವಾಗದಿರಲಿ ಎಂದು ಕಂಪ್ಲಿ ಪಟ್ಟಣದ ಕಲ್ಯಾಣ ಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿ ತಿಳಿಸಿದರು.
ಅವರು ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ವೀರಶೈವ ಸಂಘ, ವೀರಶೈವ ಸಮಾಜದ ವಿವಿಧ ಸಂಘಟನೆಗಳು ಏರ್ಪಡಿಸಿದ್ದ ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀರೇಣುಕಾಚಾರ್ಯರ ಜಯಂತಿಯಲ್ಲಿ ಮಾತನಾಡಿ, ವೀರಶೈವ ಧರ್ಮ ಅತ್ಯಂತ ಪ್ರಾಚೀನ,ಇದರ ಇತಿಹಾಸ ಮತ್ತು ಪರಂಪಪರೆ ಅಪೂರ್ವ,ಕಾಯಕ ಹಾಗೂ ದಾಸೋಹ ಭಾವನೆಗಳನ್ನು ಬೆಳೆಸಿದ ಶ್ರೇಯಸ್ಸು ವೀರಶೈವ ಧರ್ಮಕ್ಕಿದೆ ಎಂದರು.
ಕಂಪ್ಲಿ ತಾಲ್ಲೂಕು ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜಸ್ವಾಮಿ, ಮಾಜಿ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಸಮಾಜದ ಹಿರಿಯರಾದ ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ ಹಾಗೂ ಇತರರು ಮಾತನಾಡಿ, ಜ್ಞಾನಕರ್ಮ ಸಮುಚ್ಛಯದಿಂದ ಕೂಡಿದ ವೀರಶೈವ ಧರ್ಮದಲ್ಲಿ ವ್ಯಕ್ತಿ ನಿಷ್ಠೆಗಿಂತ ತತ್ವ ನಿಷ್ಠೆಗೆ,ಚರಿತ್ರೆಗಿಂತ ಚಾರಿತ್ರ್ಯಕ್ಕೆ, ಸ್ಥಾವರಕ್ಕಿಂತ ಜಂಗಮಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಿದೆ ಎಂದರು. ವೀರಶೈವ ಧರ್ಮ ಸಂಸ್ಥಾಪಕರಾಗಿ,ರಂಭಾಪುರಿ ಪೀಠದ ಪೀಠಾಚಾರ್ಯರಾಗಿ, ಗುರ್ತು ಸ್ಥಳದ ಸಂಚಾಲಕರಾಗಿ ಮಾನವ ಮಹಾದೇವನಾಗುವ ಅದ್ಭುತ ಸಿದ್ಧಾಂತದ ಅಡಿಪಾಯದಲ್ಲಿ ವೀರಶೈವ ಮತವನ್ನು ಭೂಮಿಯಲ್ಲಿ ಸ್ಥಾಪಿಸಿದರು ಎಂದು ತಿಳಿಸಿದರು.
ಇದಕ್ಕೂ ಮುನ್ನ ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಪುಷ್ಪಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಬಿ.ರವೀಂದ್ರಕುಮಾರ್, ಸಮಾಜದ ಮುಖಂಡರಾದ ವಾಲಿ ಕೊಟ್ರಪ್ಪ, ಕಲ್ಗುಡಿ ವಿಶ್ವನಾಥ್, ಘನಮಠದಯ್ಯ ಶಾಸ್ತ್ರಿ,ಡಾ.ಜಗನ್ನಾಥ್ ಹಿರೇಮಠ, ವಿ.ವಿದ್ಯಾಧರ್, ಕೆ.ಎಂ.ವಾಗೀಶ್, ಬಿ.ವಿ.ಗೌಡ, ಸಚಿನ್ ಪುಟ್ಟಿ, ಆರವಿ ಅಮರೇಶ ಗೌಡ,ಎಸ್.ಚಂದ್ರಶೇಖರ್, ಟಿ.ಎಚ್.ಎಂ.ರಾಜಕುಮಾರ್, ಎನ್.ಎಂ.ಪತ್ರೆಯ್ಯಸ್ವಾಮಿ, ವೀರಯ್ಯಸಾಲಿಮಠ, ಎಸ್.ಡಿ.ಬಸವರಾಜ, ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಡಾ.ಶಾರದಾ ಹಿರೇಮಠ, ಕಾರ್ಯದರ್ಶಿ ಸುಮಂಗಳಾ, ಖಜಾಂಚಿ ಎಸ್.ಸಿಂಧು, ಮಾಜಿ ಅಧ್ಯಕ್ಷೆ ಶಿವಗಂಗಮ್ಮ ಮುಕ್ಕುಂದಿ, ಅನುಪಮಾ , ಅರವಿ, ಎಚ್.ಶೋಭಾ ಮತ್ತು ಪದಾಧಿಕಾರಿಗಳು, ವೀರಶೈವ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು , ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

ಕಲ್ಯಾಣ ಚೌಕಿಮಠದಲ್ಲಿ : ಪಟ್ಟಣದ ಶ್ರೀ ಕಲ್ಯಾಣ ಚೌಕಿಮಠದಲ್ಲಿ ಮಠದ ಮುಖಂಡರಾದ ಕೆ.ಎಂ.ಬಸವರಾಜ ಶಾಸ್ತ್ರಿ ಮತ್ತು ಚನ್ನಮಲ್ಲಯ್ಯ ಶಾಸ್ತ್ರಿ ನೇತೃತ್ವದಲ್ಲಿ ವೀರಶೈವ ಧರ್ಮ ಸಂಸ್ಥಾಪಕರಾದ ಆದಿ ಜಗದ್ಗುರುಗಳಾದ ಶ್ರೀರೇಣುಕಾಚಾರ್ಯ ಜಯಂತಿ ಮತ್ತು ಯುಗಮಾನೋತ್ಸವವನ್ನು ಸರಳವಾಗಿ ಆಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶ್ರೀಮಠದ ಸದ್ಭಕ್ತರು ಮತ್ತು ವೀರಶೈವ ಸಮಾಜದವರು ಭಾಗವಹಿಸಿದ್ದರು.
ಪಟ್ಟಣದ ಪುರಸಭೆಯೂ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಜಯಂತಿಯನ್ನು ಆಚರಣೆ ಮಾಡಲಾಯಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!