ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಏಪ್ರಿಲ್ ಕೊನೆ ವಾರದಲ್ಲಿ ಕಂಪ್ಲಿ ತಾಲೂಕು ಮಟ್ಟದ ಬಯಲಾಟ ಸಮ್ಮೇಳನ : ಡಾ. ದುರ್ಗಾದಾಸ್

ಬಳ್ಳಾರಿ / ಕಂಪ್ಲಿ : ಸ್ಥಳೀಯ ಶಾಸಕರ, ಸಂಘ-ಸಂಸ್ಥೆ ಹಾಗೂ ಕಲಾವಿದರ ಸಹಕಾರದೊಂದಿಗೆ ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ಕಂಪ್ಲಿ ತಾಲೂಕು ಮಟ್ಟದ ಬಯಲಾಟ ಸಮ್ಮೇಳನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯ ರಾಜ್ಯಾಧ್ಯಕ್ಷ ಡಾ.ದುರ್ಗಾದಾಸ್ ತಿಳಿಸಿದರು.
ಅವರು ಪಟ್ಟಣದ ಅತಿಥಿ ಗೃಹದಲ್ಲಿ ಆದಿವಾಸಿ ಜನಪದ ಕಲೆ ಹಾಗೂ ಬಯಲಾಟದ ಬಗ್ಗೆ ಸ್ಥಳೀಯ ಕಲಾವಿದರೊಂದಿಗೆ ಚರ್ಚಿಸಿದ ನಂತರ ಮಾತನಾಡಿ, ಬಳ್ಳಾರಿ ಜಿಲ್ಲೆ ಬಯಲಾಟದ ತವರು ಮನೆಯಾಗಿದೆ. ಕಂಪ್ಲಿ ತಾಲೂಕಿನ ಕಾಳಗಿ ಈರಣ್ಣ ಬರೆದಂತಹ ಕನಕಾಗಿ ಕಲ್ಯಾಣ ಎಂಬ ಪುಸ್ತಕವು ಬಳ್ಳಾರಿ ಜಿಲ್ಲಾದ್ಯಂತ ಅತ್ಯಂತ ಪ್ರಸಿದ್ಧ ಪಡೆದಿದೆ. ರಾಮಸಾಗರದ ಸಾಲಿ ವೆಂಕಣ್ಣಯ್ಯನವರು ಬರೆದಂತಹ ಏಳು ಬಯಲಾಟ ಕೂಡ ಜನಮನ್ನಣೆಗೆ ಪಾತ್ರವಾಗಿವೆ. ಇದರಲ್ಲಿ ಗಿರಿಜಾ ಕಲ್ಯಾಣ, ರಾವಣ ದಿಗ್ವಿಜಯ, ಪ್ರಹ್ಲಾದ ಚರಿತ್ರೆ ಸೇರಿದಂತೆ ಹಲವು ಬಯಲಾಟಗಳು ಜಿಲ್ಲೆಯ ಹೆಗ್ಗಳಿಕೆಯ ಜೊತೆಗೆ ನಾಡಿನುದ್ದಕ್ಕೂ ಪಸರಿಸುವ ನಿಟ್ಟಿನಲ್ಲಿ ಅವರ ಪಾತ್ರವೂ ದೊಡ್ಡದಿದೆ. ಈ ಜಿಲ್ಲೆಯ ತುಂಬಾ ಅಲೆಮಾರಿ, ಅರೆಅಲೆಮಾರಿ ಮತ್ತು ಸ್ಥಳೀಯ ಕಲಾವಿದರು ಬಯಲಾಟಗಳನ್ನು ಪ್ರತಿ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪ್ರದರ್ಶನ ಮಾಡುತ್ತಾ ಈ ಬಯಲಾಟ ಕಲೆ ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿದ್ದಾರೆ. ಆಧುನಿಕ ಯುಗದಲ್ಲಿ ಬಯಲಾಟ ಕಣ್ಮರೆಯಾಗುತ್ತಿವುದು ವಿಷಾಧನೀಯವಾಗಿದೆ. ಆದ್ದರಿಂದ ಈ ಬಯಲಾಟ ಉಳಿಸಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯವಾಗಿದೆ. ಈ ದೃಷ್ಟಿಯಿಂದ ಕರ್ನಾಟಕ ಬಯಲಾಟ ಅಕಾಡೆಮಿವತಿಯಿಂದ ಏಪ್ರಿಲ್ ತಿಂಗಳ ಕೊನೆ ವಾರದಲ್ಲಿ ಕಂಪ್ಲಿ ತಾಲೂಕು ಮಟ್ಟದ ಬಯಲಾಟ ಸಮ್ಮೇಳನ ಏರ್ಪಡಿಸುವ ಉದ್ದೇಶ ಹೊಂದಿದ್ದು, ಸ್ಥಳೀಯ ಶಾಸಕರ, ಸಂಘ ಸಂಸ್ಥೆಯವರ ಮತ್ತು ಬಯಲಾಟ ಕಲಾವಿದರ ಬೆಂಬಲ ಮತ್ತು ಸಹಕಾರದೊಂದಿಗೆ ಯಶಸ್ವಿ ಮಾಡಿಕೊಡಬೇಕಾಗಿದೆ ಎಂದರು.
ಜೈ ಆದಿವಾಸಿ ತಾಷಾರಾಂಡೋಲ್ ಕಲಾ ತಂಡದ ಮುಖ್ಯಸ್ಥ ಎಚ್.ಪಿ.ಶಿಕಾರಿರಾಮು ಮಾತನಾಡಿ, ಬಯಲಾಟ ಹಾಗೂ ಜನಪದ ಕಲೆಗಳಿಗೆ ತನ್ನದೇ ಆದ ಇತಿಹಾಸವಿದೆ. ಇಂದಿನ ತಂತ್ರಜ್ಞಾನದಲ್ಲಿ ಸಾಕಷ್ಟು ಕಲೆಗಳು ಮರೆಯಾಗುವಂತಾಗಿದೆ. ಆದ್ದರಿಂದ ಸರ್ಕಾರ ಈ ಕಲೆಗಳ ಅಳಿವು ಉಳಿವಿಗಾಗಿ ಹೆಚ್ಚಿನ ಗಮನ ಹರಿಸಿ, ಶಾಲೆ ಸೇರಿದಂತೆ ಪ್ರತಿಯೊಂದು ಹಂತದಲ್ಲಿ ಕಲೆಗಳಿಗೆ ಮನ್ನಣೆ ನೀಡಿ, ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ಅಗತ್ಯವಾಗಿದೆ ಎಂದರು.
ನಂತರ ಕರ್ನಾಟಕ ರಾಜ್ಯ ಬಯಲಾಟ ಅಕಾಡೆಮಿಯ ರಾಜ್ಯಾಧ್ಯಕ್ಷ ಡಾ. ದುರ್ಗಾದಾಸ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲೇಶಪ್ಪ, ಯಮನಪ್ಪ, ರಾಘವೇಂದ್ರ ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!