
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಕೆಂಗಾನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಲಿಂಗದಳ್ಳಿ ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ನಡೆದಿರುವ ಜಿ. ಜಿ. ಎಂ. ಕಾಮಗಾರಿ ತುಂಬಾನೆ ಕಳಪೆ ಕಾಮಗಾರಿ ಆಗಿದ್ದು ಸರಿಯಾಗಿ ಕುಡಿಯಲು ನೀರು ಬರದೆ ಇದ್ದು ಒಂದು ವೇಳೆ ಬಂದರು ಅರ್ಧ ನೀರು ಗಟಾರದಲ್ಲಿ ಅರ್ಧ ನೀರಿನಲ್ಲಿ ಎಲ್ಲಿ ಇದರ ಗೋಳು ಕೇಳುವವರಿಲ್ಲ ಗ್ರಾಮ ಪಂಚಾಯತಿ ಕೆಂಗಾನೂರು ಹಾಗೂ ಸಂಬಂಧಪಟ್ಟ ತಾಲೂಕಿನ ಕಚೇರಿಗೆ ಹಲವಾರು ಬಾರಿ ದೂರು ಸಲ್ಲಿಸಿ ಪತ್ರಿಕೆಗಳಲ್ಲಿ ಸಹ ವಿಷಯ ಪ್ರಕಟವಾದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಮುಂದೆ ಕಥೆ ನಾವೇನು ಮಾಡೋಣ ಅನ್ನುತ್ತಿದ್ದಾರೆ.
ವರದಿ ಮಂಜು ಎಂ. ಚಿಕ್ಕಣ್ಣವರ




















