
ಬಾಗಲಕೋಟೆ -ಮುಧೋಳ :
ಗುರುಗಳ ಪ್ರೀತಿ ಮತ್ತು ಪ್ರೇಮವನ್ನು ಸಂಪಾದಿಸಿದರೆ ಬದುಕು ಸಾರ್ಥಕತೆಯನ್ನು ಹೊಂದಲಿಕ್ಕೆ ಸಾಧ್ಯ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.ಅವರು ಮುಧೋಳ ತಾಲೂಕಿನ ನಾಗರಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ನೇ ವಗ೯ದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಸಾನ್ನಿಧ್ಯ ವಹಿಸಿ ಸಸಿಗೆ ನೀರೆರೆದು ಮಾತನಾಡುತ್ತಾ ಗುರುವೇ ತಾಯಿ. ಗುರುವೇ ತಂದೆ. ಗುರುವೇ ದೈವದಾತಾರ. ಎಂದ ಅವರು ಗುರುವಿನಲ್ಲಿ ತಂದೆ ತಾಯಿಗಳನ್ನ ಕಾಣಿ ಎಂದ ಅವರು ತಂದೆ-ತಾಯಿಗಳನ್ನು ಗೌರವಿಸಿ. ಗುರುವಿನಲ್ಲಿ ಶ್ರದ್ಧೆ ಭಕ್ತಿ ಇರಲಿ ಎಂದು ಹೇಳಿದರು. ಸಿ.ಆರ್ ಪಿ.ನವೀನ ಜಿಗಜಿನಿ .ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎನ್.ಎಸ್ ನಾಗವೇಕರ ವಿ.ಜಿ ರೋಡಕರ್. ಎಸ್ ಭಾಗವಾನ್. ರವಿಕುಮಾರ್ ಹಂಚಿನಾಳ. ಹಿರಿಯರಾದ ದುಂಡಪ್ಪ ಕೈಪಾಳೆ, ಯಲ್ಲಪ್ಪ ಮಾರಾಪುರ್. ರಾಜಶೇಖರ್ ಬೆಳಿಗೇರಿ. ಮುಂತಾದವರು ಪಾಲ್ಗೊಂಡಿದ್ದರು. ಹಿರಿಯ ಶಿಕ್ಷಕರಾದ ವ್ಹಿ.ಡಿ.ಬಂಡಿ ಗುರುಗಳು ಸ್ವಾಗತಿಸಿ ವಂದಿಸಿದರು ಗುರುಮಾತೆಯರು ಪ್ರಾರ್ಥಿಸಿದರು.
- ಕರುನಾಡ ಕಂದ ಪತ್ರಿಕೆ




















