ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉಳ್ಳವರು ಇಲ್ಲದವರಿಗೆ ಅನ್ನ, ಬಟ್ಟೆ ಹಾಗೂ ಹಣವನ್ನು ನೀಡುವ ಮೂಲಕ ಉದಾರತೆ ತೋರಬೇಕು : ಸೈಯದ್ ಷಾ ಅಬುಲ್ ಹಸನ್ ಖಾದ್ರಿ

ಬಳ್ಳಾರಿ / ಕಂಪ್ಲಿ: ಪಟ್ಟಣದ ಹೊಸ ಬಸ್ ನಿಲ್ದಾಣದ ಮುದ್ದಾಪುರ ಅಗಸಿ ಬಳಿಯಲ್ಲಿ ಕದೀಮ್ ಈದ್ಗಾ(ಸುನ್ನಿ) ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಸೈಯ್ಯದ್ ಷಾಹ್ ಅಬುಲ್ ಹಸನ್ ಖಾದ್ರಿ ಉರಫ್ ಅಜಂ ಪಾಷಾ ಖಾದ್ರಿ ಸಾಹೇಬ್ ಸಜ್ಜಾದೇ ನಶೀನ್ ( ಪೀಠಾಧಿಪತಿ ) ದಿವಾನಖಾನ್ ಇವರ ದಿವ್ಯ ಸಾನ್ನಿಧ್ಯದಲ್ಲಿ ಶನಿವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಇಲ್ಲಿ ಕೆಲ ಕಾಲ ಪ್ರಾರ್ಥನೆ ಸಲ್ಲಿಸಿದ ನಂತರ ಮುಸ್ಲಿಂ ಬಾಂಧವರು ಪರಸ್ಪರ ವಿನಿಮಯ ಮಾಡಿಕೊಂಡರು.
ಧರ್ಮಗುರು ಸೈಯದ್ ಷಾ ಅಬುಲ್ ಹಸನ್ ಖಾದ್ರಿ ಮಾತನಾಡಿ, ಪ್ರತಿಯೊಬ್ಬರೂ ತ್ಯಾಗ ಬಲಿದಾನದ ಹಬ್ಬವಾದ ರಂಜಾನ್ ಆಚರಣೆ ಮಾಡುತ್ತಿದ್ದಾರೆ. ಉಳ್ಳವರು ಇಲ್ಲದವರಿಗೆ ಅನ್ನ, ಬಟ್ಟೆ ಹಾಗೂ ಹಣವನ್ನು ನೀಡುವ ಮೂಲಕ ಉದಾರತೆ ತೋರಬೇಕು. ರಂಜಾನ್ ಹಬ್ಬದ ಸಂದರ್ಭದಲ್ಲಿ ಒಂದು ತಿಂಗಳು ಕೈಗೊಳ್ಳುವ ಉಪವಾಸದಿಂದ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ ಎಂದರು.
ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ ದಾನ ಧರ್ಮ ಮಾಡಿದರು.
ಈ ಸಂದರ್ಭದಲ್ಲಿ ಧರ್ಮ ಗುರುಗಳಾದ ಸೈಯದ್ ಷಾ ಅಬ್ದುಲ್ ಖಾದ್ರಿ ಉರುಫ್ ಮುಸ್ತಾಫ ಸಾಹೇಬ್ ದಿವಾನ್ ಖಾನೆ, ಕಂಪ್ಲಿ, ಸೈಯದ್ ಉಮೇಶ್ ಸಾಹೇಬ್ ಖಾದ್ರಿ, ಸೈಯದ್ ಮುಸ್ತಾಫಾ ಖಾದ್ರಿ ಉರುಫ್ ಚಾಂದ್ ಬಾಷಾ ಸಾಹೇಬ್, ಕಂಪ್ಲಿ, ಮುಖಂಡರಾದ ಹರ್ಷದ್, ಮೆಹಮೂದ್, ಕೆ.ಅಬ್ದುಲ್ ವಾಹಿದ್, ಎಂ ಶಬ್ಬೀರ್, ಯು.ಜಿಲಾನಸಾಬ್, ಬಿ.ಜಾಫರ್, ಅಕನಿ, ಬಿ.ಮೆಹಬೂಬ್, ಲಡ್ಡು ಹೊನ್ನೂರವಲಿ, ಗೆಜ್ಜಳ್ಳಿ ಭಾಷಾ, ಕೆ.ಮೆಹಬೂಬ್ ಸೇರಿದಂತೆ ಎಲ್ಲ ಮಸೀದಿಗಳ ಅಧ್ಯಕ್ಷರು ಮತ್ತು ಮುತಾವಲಿಗಳು, ಕಂಪ್ಲಿ-ಕೋಟೆಯ, ಬೆಳಗೋಡಹಾಳ್ ಜಾಮೀಯಾ ಮಸೀದಿಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!