ಮಂಗಳೂರು: ತೆಂಕು ತಿಟ್ಟಿನ ದಶಾವತಾರಿ ಸುರಿಕುಮೇರು ಗೋವಿಂದ ಭಟ್ ಅಸ್ತಂಗತಾಗಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ವಾಗಿದ್ದು ಯಕ್ಷಗಾನದ ಕಲಾದೇವಿಯ ಮಣಿ ಮುಕುಟವೊಂದು ಕಳಚಿದಂತಾಗಿದೆ ಎಂದು ಶ್ರೀ ಇರಾ ನೇಮು ಪೂಜಾರಿ, ಖ್ಯಾತ ಲೇಖಕ, ಪ್ರಗತಿಪರ ಚಿಂತಕ ಹಾಗೂ ಗೌರವ ಅಧ್ಯಕ್ಷರು ಶ್ರೀ ಕಲ್ಲುರ್ಟಿ ಪಂಜುರ್ಲಿ, ಸತ್ಯದೇವತೆ ಪರಿವಾರ ಶಕ್ತಿಗಳು ಶ್ರೀ ಕ್ಷೇತ್ರ ವಾಲ್ತಾಜೆ ಇವರು ಶೋಕ ವ್ಯಕ್ತಪಡಿಸಿದ್ದಾರೆ.
ಶ್ರೀ ಗೋವಿಂದ ಭಟ್ಟರು ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ಸುಮಾರು ೧೪ ವರುಷ ಶ್ರೀ ಧರ್ಮಸ್ಥಳ ಮೇಳದಲ್ಲಿ ೧೯೬೮ ರಿಂದ ಮೇಳ ಕ್ಕೆ ಸೇರಿ ಸುಮಾರು ೫೪ ವರುಷ ತಿರುಗಾಟ ನಡೆಸಿದರಲ್ಲದೆ ಮೂಲ್ಕಿ ,ಕೂಡ್ಲು ಮೇಳದಲ್ಲಿ ಕೂಡಾ ಸೇವೆ ಸಲ್ಲಿಸಿದರು. ವಿವಿಧ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಅವರ ಪಾತ್ರಕ್ಕೆ ಸರಿ ಸಾಟಿ ಅವರೇ ಅಲ್ಲದೆ ಬೇರಿಲ್ಲ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕೊಡಲಿ, ಕುಟುಂಬಕ್ಕೂ, ಸಮಾಜಕ್ಕೂ ದುಃಖ ಸೇರಿಸುವ ಭಗವಂತಶಕ್ತಿ ಕೊಡಲೆಂದು ಶ್ರೀ ಇರಾ ನೇಮು ಪೂಜಾರಿ ಗೌರವ ಅಧ್ಯಕ್ಷರು ಶ್ರೀ ಕಲ್ಲುರ್ಟಿ ಪಂಜುರ್ಲಿ, ಸತ್ಯದೇವತೆ ಪರಿವಾರ ಶಕ್ತಿಗಳು ಶ್ರೀ ಕ್ಷೇತ್ರ ವಾಲ್ತಾಜೆ ಹಾಗೂ ಚೇತನ್ ಅಧ್ಯಕ್ಷರು ,ಮನೋಹರ್ ಕಾರ್ಯದರ್ಶಿ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.




















