ಬೆಂಗಳೂರು: ಲೇಖಕಾ ಸಾಹಿತ್ಯ ವೇದಿಕೆ ಮತ್ತು ಬಿ.ಎಂ.ಶ್ರೀ. ಪ್ರತಿಷ್ಠಾನ ಇವರುಗಳ ಸಂಯುಕ್ತಾಶ್ರಯದಲ್ಲಿ
ಸಾಧಕಿಯರೊಡನೆ ಸಂವಾದ ಎಂಬ ಮಹತ್ವ ಪೂರ್ಣ ಮಾಹಿತಿ ಕಾರ್ಯಕ್ರಮವನ್ನು ಇದೇ ಬರುವ ದಿನಾಂಕ ೨೫-೦೩-೨೦೨೬ ಬುಧವಾರ, ಬೆಳಿಗ್ಗೆ ೧೦-೩೦ ಗಂಟೆಗೆ ಎಂ.ವಿ.ಸಿ. ಸಭಾಂಗಣ, ಬಿ.ಎಂ.ಶ್ರೀ. ಕಲಾಭವನ, ೩ನೇ ಮುಖ್ಯರಸ್ತೆ, ನರಸಿಂಹರಾಜ ಕಾಲೋನಿ, ಬೆಂಗಳೂರು- ೫೬೦೦೦೪ ಇಲ್ಲಿ ಆಯೋಜಿಸಿದ್ದು ಈ ಸಂಧರ್ಭದಲ್ಲಿ ಶ್ರೀಮತಿ ಲಲಿತಮ್ಮ ಡಾ. ಚಂದ್ರಶೇಖರ್ ಹಿರಿಯ ಲೇಖಕಿ, ಹಾಗೂ ಬಹುಮುಖ ಪ್ರತಿಭೆ ಹಾಗೂ
ಶ್ರೀಮತಿ ವೈ.ಕೆ. ಸಂಧ್ಯಾ ಶರ್ಮ, ಖ್ಯಾತ ನೃತ್ಯವಿಮರ್ಶಕಿ, ಹಾಗೂ ಕಾದಂಬರಿಗಾರ್ತಿ ಪ್ರಖ್ಯಾತ ರಂಗಕರ್ಮಿ ಇವರುಗಳು ಸಂವಾದದಲ್ಲಿ ಭಾಗವಹಿಸುವರು.
ಕಾರ್ಯಕ್ರಮವನ್ನು ಉದ್ಘಾಟನೆಯನ್ನು ಶ್ರೀಮತಿ ಶೈಲಜಾ ಸುರೇಶ್ , ಲೇಖಕಿ, ಸಂಚಾಲಕರು, ಹಾಗೂ ಸಂಪಾದಕರು ಇವರು ನಡೆಸಿಕೊಡುವರಲ್ಲದೆ ಅಧ್ಯಕ್ಷತೆಯನ್ನು ಡಾ. ರಾಮಲಿಂಗೇಶ್ವರ (ಸಿಸಿರಾ), ಕನ್ನಡ ಉಪಾನ್ಯಸಕರು, ಶೇಷಾದ್ರಿ ಪುರಂ, ಪದವಿ ಪುರ್ವ ಕಾಲೇಜು ಇವರು ವಹಿಸಿಕೊಳ್ಳುವರು.
ಸಂವಾದದಲ್ಲಿ ಶ್ರೀಮತಿ ನಾಗವೇಣಿ ರಂಗನ್ – ವಿದ್ಯಾಶಿರಹಟ್ಟಿ- ಮಧುರಾಕರ್ಣಂ ಲಲಿತಾ ಶೇಷಾದ್ರಿ – ಸ್ವರ್ಣ ಗೌರಿ ಕೆ.ಎಸ್.- ಕೆ.ಎಂ. ಲೋಲಾಕ್ಷಿ, ವನಜಾ ಸುರೇಶ್ ಮುಕುಂದ ಗಂಗೂರ್ ಮತ್ತು ಸಭಿಕರು ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.




















