
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಮೊದಲ ರಾತ್ರಿ ಬಿರುಗಾಳಿ ಹಾಗೂ ಮಳೆಯಿಂದ ಪಟ್ಟಣದಲ್ಲಿ ಮರಗಳು ಹಾಗೂ ವಿದ್ಯುತ್ ಲೈನ್ ಕಂಬಗಳು ಮುರಿದು ತುಂಬಾ ಹಾನಿಯಾಗಿದೆ. ತೀರ್ಥಹಳ್ಳಿ, ಬೆಟ್ಟಮಕ್ಕಿ ,ಕೆ ಪಿ ಟಿ ಸಿ ಎಲ್ ಕಾಲೋನಿಯ ಕ್ವಾಟ್ರಸ್ ಮನೆಯ ಮೇಲೆ ದೊಡ್ಡ ಹಲಸಿನ ಮರ ಹಾಗೂ ವಿದ್ಯುತ್ ಕಂಬ ಮುರಿದು ಬಿದ್ದು ಮನೆಗೆ ಹಾನಿಯಾಗಿದೆ. ಮನೆಯಲ್ಲಿ ಯಾರೂ ವಾಸ ಇಲ್ಲದ ಕಾರಣ ಯಾವುದೇ ಅಪಾಯ ಆಗಿಲ್ಲ. ಎಲ್ಲಾ ಕ್ವಾಟ್ರಾಸಿನ ಪಕ್ಕದಲ್ಲಿ 40,50 ವರುಷದ ಹಳೆಯ ದೊಡ್ಡ ದೊಡ್ಡ ಮರಗಳು ಇದ್ದು ಮುಂದಿನ ದಿನಗಳಲ್ಲಿ ಮರ ಮುರಿದು ಅಪಾಯ ಸೃಷ್ಟಿಯಾಗಬಹುದು ಅದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೆ ಪಿ ಟಿ ಸಿ ಎಲ್ ಅಧಿಕಾರಿಗಳು ಬೇಗನೆ ಎಚ್ಚೆತ್ತು ಮರಗಳನ್ನು ತೆರವುಗೊಳಿಸಬೇಕೆಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ವರದಿ : ಪ್ರಸಾದ್ ಹೆಚ್.ಬಿ, ತೀರ್ಥಹಳ್ಳಿ.




















