ಬಳ್ಳಾರಿ / ಕಂಪ್ಲಿ : ಏ.5ರಂದು ಡಾ.ಬಾಬು ಜಗಜೀವನ್ರಾಮ್ ಹಾಗೂ ಏ.14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ತಿಳಿಸಿದರು.
ಅವರು ಗುರುವಾರ ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಎರಡೂ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ಏ.14ರಂದು ಪಟ್ಟಣದ ಸಂತೆ ಮಾರುಕಟ್ಟೆಯಿಂದ ಭಾವಚಿತ್ರ ಮೆರವಣಿಗೆ ಮಾಡಲಾಗುವುದು. ಮತ್ತು ಸಂವಿಧಾನ ಮತ್ತು ಕಾನೂನು ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾತನಾಡಲು ಅವಕಾಶವಿದೆ. ಪ್ರತಿಯೊಬ್ಬರು ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾ.ಪಂ ಇಒ ಆರ್.ಕೆ.ಶ್ರೀಕುಮಾರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ (ಗ್ರೇಡ್-1) ಪಿ.ರಾಜೇಶ್ವರಿ, ಎಎಸ್ಐ ಬಸವರಾಜ, ನಿಲಯ ಪಾಲಕ ವಿರುಪಾಕ್ಷಪ್ಪ, ಮುಖಂಡರಾದ ಜಿ.ರಾಮಣ್ಣ, ಸಣಾಪುರ ಮರಿಸ್ವಾಮಿ, ಯಲ್ಲಪ್ಪ, ಜಿ.ಪ್ರಕಾಶ, ಹಂಪಾದೇವನಹಳ್ಳಿ ಹುಲುಗಪ್ಪ, ಹೆಚ್.ಜಡೆಪ್ಪ ಎಮ್ಮಿಗನೂರು, ಶಂಭುಲಿಂಗ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















