ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಅಡುಗೆ ಅನಿಲ ಸಿಲಿಂಡರುಗಳಿಗೆ ಮುಗಿಬಿದ್ದ ಜನತೆ.

ಬಳ್ಳಾರಿ / ಕಂಪ್ಲಿ : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ದದ ಹಿನ್ನೆಲೆಯಲ್ಲಿ ದೇಶಾದ್ಯಂತ, ಹಾಗೂ ರಾಜ್ಯದಲ್ಲಿ ಅಡುಗೆ ಅನಿಲ ಸಿಲಿಂಡರುಗಳಿಗೆ ತೊಂದರೆಯಾಗಿದ್ದು, ಕಂಪ್ಲಿ ಪಟ್ಟಣದಲ್ಲಿಯೂ ಸಹಿತ ಸಿಲಿಂಡರುಗಳಿಗೆ ಅಡಚಣೆಯಾಗಿದ್ದು, ಪಟ್ಟಣದ ಶರತ್ ಗ್ಯಾಸ್ ಏಜೆನ್ಸಿ ಕಚೇರಿ ಮುಂಭಾಗದಲ್ಲಿ ಸಿಲಿಂಡುರುಗಳಿಗಾಗಿ ಗ್ರಾಹಕರು ಮುಗಿಬಿದ್ದಿದ್ದರು.
ಇಂದು ಬೆಳಿಗ್ಗೆ 5 ಗಂಟೆಯಿಂದಲೇ ಕಂಪ್ಲಿ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ್ದ ಗ್ರಾಹಕರು ಗ್ಯಾಸ್ ಅಂಗಡಿಯ ಮುಂದೆ ಸಾಲುಗಟ್ಟಿ ನಿಂತಿದ್ದರು.
ಗ್ಯಾಸ್ ಅಂಗಡಿ ತೆರೆಯುತ್ತಿದ್ದಂತೆಯೇ ಗ್ರಾಹಕರು ನಾ ಮುಂದು ತಾ ಮುಂದು ಎನ್ನುವಂತೆ ಅಂಗಡಿಗೆ ನುಗ್ಗಲು ಪ್ರಯತ್ನಿಸಿದರು. ಗ್ಯಾಸ್ ಅಂಗಡಿ ಮಾಲೀಕರು ಎಲ್ಲರನ್ನೂ ಸಮಾಧಾನ ಪಡಿಸಿ ಈಗಾಗಲೇ ಗ್ಯಾಸ್ ಬುಕ್ ಮಾಡಿವರಿಗೆ ಸೀನಿಯಾರಿಟಿ ಪ್ರಕಾರ ಗ್ಯಾಸ್ ಸಿಲಿಂಡರ್ ನೀಡಲಾಗುವುದು,ಯಾರೂ ಗೊಂದಲ ಮಾಡಿಕೊಳ್ಳಬೇಡಿ. ಅನಿಲ ಜೋಡಣೆಗೆ ನೋಂದಣಿಯಾಗಿರುವ ಮೊಬೈಲ್ ಮೂಲಕ ಯಾರು ಈಗಾಗಲೇ ನೋಂದಣಿ ಮಾಡಿದ್ದಾರೋ ಅವರಿಗೆ ಒನ್ ಟೈಮ್ ಪಾಸವರ್ಡ್ ಸಂದೇಶ ಅವರ ಮೊಬೈಲಿಗೆ ಬರುತ್ತದೆ. ಅವರು ಬಂದು ಸಿಲಿಂಡರು ಪಡೆಯಬಹುದು, ಈಗಾಗಲೇ ಸರ್ಕಾರವು ಸಿಲಿಂಡರುಗಳ ಬುಕ್ಕಿಂಗ್ ನಿರಂತರವಾಗಿ ಮಾಹಿತಿ ನೀಡುತ್ತಿದ್ದಾರೆ. ಯಾರಿಗಾದರೂ ಬುಕ್ಕಿಂಗ್ ಮಾಡಲು ಗೊತ್ತಾಗದಿದ್ದರೆ ಗ್ರಾಹಕರ ಮೊಬೈಲ್ ಮೂಲಕ ಗ್ಯಾಸ್ ಬುಕ್ ಮಾಡಿಕೊಡುತ್ತೇವೆ ಎಂದು ಗ್ರಾಹಕರನ್ನು ಸಮಾಧಾನ ಪಡಿಸಿದರು. ನಂತರ ಗ್ರಾಹಕರು ತಮಗೆ ಬಂದಿರುವ ಸಿಲಿಂಡರುಗಳನ್ನು ಪಡೆದರು.

” ಕಂಪ್ಲಿ ಪಟ್ಟಣದಲ್ಲಿ ಮನೆ ಬಳಕೆ ಸಿಲಿಂಡರುಗಳಿಗೆ ಕೊರತೆ ಇಲ್ಲ. ಆದರೆ ಮೊದಲಿನಂತೆ ಸಿಲಿಂಡರುಗಳು ಬಿಡುಗಡೆಯಾಗುತ್ತಿಲ್ಲ.
ಅಂದಾಜು 20 ರಿಂದ 30 ರಷ್ಟು ಕಡಿಮೆ ಬರುತ್ತಿವೆ. ಆದರೆ ವಾಣಿಜ್ಯ ಸಿಲಿಂಡರುಗಳು ಬರುತ್ತಿಲ್ಲ. ವಿನಾ ಕಾರಣ ಗ್ರಾಹಕರು ಗೊಂದಲ ಸೃಷ್ಟಿಸುತ್ತಿದ್ದಾರೆ. ಸರ್ಕಾರದ ಆದೇಶದಂತೆ ಗ್ರಾಹಕರು ಗ್ಯಾಸ್ ಬುಕ್ ಮಾಡಿದರೆ ಅವರ ಮೊಬೈಲಿಗೆ ಸಂದೇಶ ಬರುತ್ತದೆ. ಜೊತೆಗೆ ಒಟಿಪಿಯೂ ಬರುತ್ತದೆ ಒಟಿಪಿ ಬಂದ ಗ್ರಾಹಕರಿಗೆ ಎರಡು ಮೂರು ದಿನಗಳಲ್ಲಿ ಸಿಲಿಂಡರುಗಳನ್ನು ನೀಡಲಾಗುತ್ತಿದೆ. ಯಾವ ಗ್ರಾಹಕರು ಸಹಿತ ಗೊಂದಲ ಮಾಡಿಕೊಳ್ಳಬಾರದು, ವದಂತಿಗಲಿಗೆ ಕಿವಿ ಕೊಡಬಾರದು “.

  • ಶ್ರೀನಿವಾಸ, ಶರತ್ ಗ್ಯಾಸ್ ಏಜೆನ್ಸಿ
    ಕಂಪ್ಲಿ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!