ಸಿರುಗುಪ್ಪ – ಭಾರತದ ಮಾಜಿ ಉಪ ಪ್ರಧಾನಮಂತ್ರಿ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ರವರ 119ನೇ ಜಯಂತಿ ಏಪ್ರಿಲ್ 5 ರಂದು ಹಾಗೂ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 135 ನೇ ಜಯಂತಿ ಏಪ್ರಿಲ್ 14ರಂದು ಈ ಉಭಯ ಮಹಾನ್ ನಾಯಕರ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಗುವುದು ಎಂದು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು, ತಾಲೂಕ ಕಾರ್ಯನಿರ್ವಾಹಕ ದಂಡಾಧಿಕಾರಿ, ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಹೇಳಿದರು. ಸಿರುಗುಪ್ಪ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್ , ಬಾಬಾಸಾಹೇಬ್ ಅಂಬೇಡ್ಕರ್ ಈ ಉಭಯ ಮಹನೀಯರ ಜಯಂತಿ ಪೂರ್ವಭಾವಿ ಸಿದ್ಧತೆಯ ಸಭೆಯು ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ನಗರ ಸಭೆ ಪಟ್ಟಣ ಪಂಚಾಯತ್ ಸರ್ವರ ಸಹಭಾಗಿತ್ವದಲ್ಲಿ ಮಹನೀಯರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಿರುಗುಪ್ಪ ತಾಲೂಕಿನಲ್ಲಿ ಮಹನೀಯರ ಜಯಂತಿಯನ್ನು ವಿಜೃಂಭಣೆ ಸಂಭ್ರಮದಿಂದ ಆಚರಿಸಲಾಗುವುದು ಏಪ್ರಿಲ್ ಐದರಂದು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರದ ನಾಮ ಫಲಕಕ್ಕೆ ಮಾಲಾರ್ಪಣೆ ಎಲ್ಲಾ ಶಾಲಾ ಕಾಲೇಜು ಕಚೇರಿಗಳಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು, ಏಪ್ರಿಲ್ 14ರಂದು ಡಾ ಬಿ ಆರ್ ಅಂಬೇಡ್ಕರ್ ಜಯಂತಿ ಹಾಗೂ ಡಾ ಬಾಬು ಜಗಜೀವನ್ ರಾಮ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಸಿರುಗುಪ್ಪ ತಾಲೂಕು ಕೇಂದ್ರ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಶಾಲಾ ಕಾಲೇಜು ನಗರಸಭೆ ಪಟ್ಟಣ ಪಂಚಾಯತ್ ಗ್ರಾಮ ಪಂಚಾಯತ್ ಗಳಲ್ಲಿ ಈ ಉಭಯ ಮಹಾನ್ ನಾಯಕರ ಜಯಂತಿಯನ್ನು ಕರ್ನಾಟಕ ಸರ್ಕಾರ ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ ಗಣ್ಯರನ್ನು ಆಹ್ವಾನಿಸಬೇಕು ಸಿರುಗುಪ್ಪ ನಗರದ ಪ್ರಮುಖ ಸರ್ಕಲ್ ಗಳು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು ಜಯಂತಿ ಕೇವಲ ಮೆರವಣಿಗೆಗೆ ಸೀಮಿತವಾಗಬಾರದು ಇಂದಿನ ಪೀಳಿಗೆಗೆ ಅಂಬೇಡ್ಕರ್ ರವರ ಸಂವಿಧಾನಾತ್ಮಕ ಮೌಲ್ಯಗಳ ಹಾಗೂ ಜಗಜೀವನ ರಾಮ್ ಅವರ ಕೃಷಿ ಮತ್ತು ಆಡಳಿತಾತ್ಮಕವಾಗಿ ಸುಧಾರಣೆಗಳ ಬಗ್ಗೆ ಅರಿವು ಮೂಡಿಸಲು ಉಪನ್ಯಾಸ ಆಯೋಜಿಸ ಬೇಕು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮಹನೀಯರ ಜಯಂತಿ ಆಚರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರ ಹಿರಿಯ ಸಹೋದರ ಸರ್ವಧರ್ಮೀಯರ ಸಂಘದ ತಾಲೂಕ ಅಧ್ಯಕ್ಷರು ಬಿ ಎಂ ಸತೀಶ್ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಎನ್ ಕರಿಬಸಪ್ಪ ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷರು ಕೊಡ್ಲೆ ಮಲ್ಲಿಕಾರ್ಜುನ ಹೆಚ್ ಬಿ ಗಂಗಪ್ಪ ಚಿಕ್ಕಬಳ್ಳಾರಿ ನಾಗಪ್ಪ ಧರಪ್ಪ ನಾಯಕ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಶಾಂತಿ ಸಭೆ ಸದಸ್ಯರು ಸಮಾಜ ಸುಧಾರಕ ಅಬ್ದುಲ್ ನಬಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಮಾತನಾಡಿದರು ರೈತ ಸಹಕಾರ ಸಂಘದ ಅಧ್ಯಕ್ಷರು ನಾಂಚರಯ್ಯ ಹಳೆಕೋಟೆ ಮೊಹಮ್ಮದ್ ಖಾಸಿಂ ವಿಶ್ವಕರ್ಮ ತಾಲೂಕ ಸಂಘದ ಮೌನೇಶ ಆಚಾರಿ ನೇಕಾರ ಸಂಘದ ತಾಲೂಕ ಅಧ್ಯಕ್ಷ ಸತ್ಯನಾರಾಯಣ ವಕೀಲರ ಸಂಘದ ತಾಲೂಕ ಅಧ್ಯಕ್ಷರು ಉಪ್ಪಾರ್ ವೆಂಕೋಬ ಅನ್ಸಾರಿ ಇಸಾಕ್ ಇಬ್ರಾಹಿಂಪುರ್ ಹಮೀದ್ ಸಾಬ್ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಮ, ಸಿಡಿಪಿಓ ಜಿ ಪ್ರದೀಪ್ ಕುಮಾರ್ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಮಡ್ಡೇರು ಸಿದ್ದಯ್ಯ ಶಿಕ್ಷಣ ಆರೋಗ್ಯ ಪೊಲೀಸ್ ಬಿ ಸಿ ಎಂ ತಾಲೂಕ ಪಂಚಾಯತಿ ನಗರಸಭೆ ನೀರಾವರಿ ಲೋಕೋಪಯೋಗಿ ಅಬಕಾರಿ ಕೃಷಿ ತೋಟಗಾರಿಕೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿ ತಮ್ಮ ಸಲಹೆ ಸೂಚನೆ ನೀಡಿದರು.
ಈ ಉಭಯ ಮಹಾನೀಯರ ಭಾವಚಿತ್ರಗಳ ಭವ್ಯ ಮೆರವಣಿಗೆ ಮುಖ್ಯ ರಸ್ತೆಗಳಿಂದ ಶಾಂತಿಯುತ ತಾಲೂಕ ಕ್ರೀಡಾ ಮೈದಾನದಲ್ಲಿ ವೇದಿಕೆ ಸೌಹಾರ್ದಯುತವಾಗಿ ನಡೆಸಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು. ಎಲ್ಲಾ ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳು ಪದಾಧಿಕಾರಿಗಳೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸೋಣ ಇದಕ್ಕೆ ಸಮಾಜದ ಸಂಘ ಸಂಸ್ಥೆಗಳು ಸಹಕಾರವು ಅತ್ಯಗತ್ಯ ಎಂದು ತಹಶೀಲ್ದಾರ್ ಗೌಸಿಯಾ ಬೇಗಂ ವಿನಂತಿಸಿ ಮನವಿ ಮಾಡಿದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















