ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಲ್ಯಾಣ ಮಹಾಮನೆಯಲ್ಲಿ ಏಪ್ರಿಲ್ 4 ಮತ್ತು 5 ರಂದು ಶರಣೆ ದಾನಮ್ಮದೇವಿ ಉತ್ಸವ ಹಾಗೂ 4ನೇ ಶರಣ ಸಮಾಗಮ.

ಗುಣತೀರ್ಥವಾಡಿಯ ಕಲ್ಯಾಣ ಮಹಾಮನೆಯಲ್ಲಿ ದಾನಮ್ಮ ಉತ್ಸವ ಹಾಗೂ 4ನೇ ಶರಣ ಸಮಾಗಮ ಹಾಗೂ ಜ್ಞಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಎರಡು ದಿನದ ಉತ್ಸವದಲ್ಲಿ ದಾಂಪತ್ಯ ಧರ್ಮ ಸಮಾವೇಶ, ಕಾಯಕ ಶರಣರ ಸಮಾವೇಶ, ಶರಣ ಜ್ಞಾನ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಗುರುವಂದನಾ ಹಾಗೂ ಜ್ಯೋತಿ ಯಾತ್ರೆಯ ಸಮಾರೋಪ ಸಮಾರಂಭ ನೆರವೇರಲಿದೆ ಎಂದು ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಬೆಳಿಗ್ಗೆ 10 ಗಂಟೆಗೆ ಪೂಜ್ಯರ ಮತ್ತು ಸರ್ವ ಶರಣರ ಸಮ್ಮುಖದಲ್ಲಿ ನಿವೃತ್ತ ನ್ಯಾಯಾಧೀಶರಾದ ಎಸ್ ಎಸ್ ನಾಗರಾಳೆಯವರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ದಿವ್ಯ ಸಾನಿಧ್ಯವನ್ನು ಹುಲಸೂರಿನ ಪೂಜ್ಯ ಶ್ರೀ ಶಿವಾನಂದ ಸ್ವಾಮಿಗಳು ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬೈಲೂರು ನಿಷ್ಕಲ ಮಂಟಪದ ಪೂಜ್ಯ ಶ್ರೀ ನಿಜಗುಣಪ್ರಭು ಮಹಾಸ್ವಾಮಿಗಳು ನೆರವೇರಿಸಲಿರುವರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಚನ ಕುಮಾರಸ್ವಾಮಿ ರೂಪಾ ಅವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶರಣ ದಿಲೀಪ ಶಿಂಧೆ ಆಶಯ ನುಡಿಯಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ರಚಿಸಿದ ” ಜೀವನ ದರ್ಶನ ” ಕೃತಿ ಬಿಡುಗಡೆಗೊಳ್ಳಲಿದ್ದು,
ಪೂಜ್ಯ ಶ್ರೀ ಡಾ. ಶಿವಲಿಂಗೇಶ್ವರ ಸ್ವಾಮಿಗಳು ಸಂಖ, ಪ್ರಭುದೇವ ಮಹಾಸ್ವಾಮೀಜಿಯವರು ಗೋರ್ಟಾ ದಿವ್ಯ ಸಮ್ಮುಖ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸ್ಥಳಿಯ ಶಾಸಕ ಶರಣು ಸಲಗರ ಮತ್ತು ಹುಮನಾಬಾದ ಶಾಸಕರು ಸಿದ್ಧು ಪಾಟೀಲ ಆಗಮಿಸಲಿದ್ದಾರೆ.
ಸಂಜೆ 6 ರಿಂದ 9ರವರೆಗೆ ನಡೆಯುವ ಭಾವೈಕ್ಯತಾ (ಕಾಯಕ ಶರಣರ) ಸಮಾವೇಶವನ್ನು ವಿಧಾನ ಪರಿಷತ್ ಸದಸ್ಯರಾದ ಶರಣ ಎಮ್ ಜಿ ಮುಳೆಯವರು ಉದ್ಘಾಟನೆ ಮಾಡಲಿದ್ದು, ಬಸವಕಲ್ಯಾಣ ಮಹಾಮನೆಯ ಅಧ್ಯಕ್ಷರಾದ ಸಿದ್ಧರಾಮ ಬೆಲ್ದಾಳ ಶರಣರು ನೇತೃತ್ವ ವಹಿಸಲಿದ್ದಾರೆ. ಬೇಲೂರಿನ ಪಂಚಾಕ್ಷರಿ ಸ್ವಾಮೀಜಿ, ಅಂಬಿಗರ ಚೌಡಯ್ಯ ಪೀಠದ ರತ್ನಕಾಂತ ಶಿವಯೋಗಿ, ಚೆನ್ನಯ್ಯ ಅರಿವು ಪೀಠದ ಕಾಂತ ಸ್ವಾಮೀಜಿ ದಿವ್ಯ ಸಮ್ಮುಖ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ದಿಲೀಪ ಶಿಂದೆಯವರು ವಹಿಸಲಿದ್ದು, ರಾಜಕೀಯ ಧುರೀಣರಾದ ಬಿ ಮಾಲಾ, ಬಾಬು ಹೊನ್ನನಾಯಕ, ಸಹಾಯಕ ಆಯುಕ್ತರಾದ ಪ್ರಕಾಶ ಕುದುರಿ ಭಾಗವಹಿಸಲಿದ್ದಾರೆ. ನಿವೃತ್ತ ಕೆ ಎ ಎಸ್ ಅಧಿಕಾರಿ ಎಸ್ ದಿವಾಕರ್ ಅವರು ಆಶಯ ನುಡಿ ನುಡಿಯಲಿದ್ದು, ವಿಶೇಷ ಉಪನ್ಯಾಸವನ್ನು ಡಾ. ಗುರುಲಿಂಗಪ್ಪ ದಬಾಲೆ ನೀಡಲಿದ್ದಾರೆ‌.

ದಿನಾಂಕ 05-04-2026ರಂದು ಬೆಳಿಗ್ಗೆ 10:30ಕ್ಕೆ ರೈತ ಸಮಾವೇಶ ಮತ್ತು ರೈತ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದು, ಬೀದರ ಕೆವಿಕೆ ಮುಖ್ಯಸ್ಥರು ಮತ್ತು ಹಿರಿಯ ವಿಜ್ಞಾನಿಗಳಾದ ಡಾ. ರವಿ ದೇಶಮುಖ ಉದ್ಘಾಟನೆ ಮಾಡಲಿದ್ದಾರೆ. ರಾಯಚೂರು ಕೃಷಿ ಮಹಾವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಆರ್ ಎಲ್ ಜಾಧವ ಅವರು ವಿಶೇಷ ಉಪನ್ಯಾಸ ಮತ್ತು ರೈತ ಸಂವಾದ ನಡೆಸಿಕೊಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಮುಂಬೈನ ಆಹಾರ ಘಟಕದ ಸಹಾಯಕ ತಂತ್ರಜ್ಞರಾದ ದೀಪ್ತಿ ಎಸ್ ಬಿರಾದಾರ ಆಶಯ ನುಡಿ ನುಡಿಯಲಿದ್ದಾರೆ.

ಮಧ್ಯಾಹ್ನ 3ರಿಂದ ನಡೆಯುವ ಯುವ ಶರಣ ಜ್ಞಾನ ಸಂಗಮದಲ್ಲಿ ದಿವ್ಯ ನೇತೃತ್ವವನ್ನು ಸಂಚಾರಿ ಜಂಗಮರಾದ ಪೂಜ್ಯ ಶ್ರೀ ಬಸವದೇವರು ವಹಿಸಲಿದ್ದು, ಪ್ರಕಾಶ ಗಂದಿಗುಡಿ ಬೀದರ; ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರೋ ನಾಗಪ್ಪ ಮುಗನೂರವರು ಆಶಯ ನುಡಿಯನ್ನಾಡಲಿದ್ದಾರೆ. ಕಾಯಕ ತತ್ವದಲ್ಲಿ ಯುವಕರ ಪಾತ್ರ ‘ ವಿಷಯದ ಕುರಿತು ಸಿದ್ರಾಮ ಶೆಟಗಾರ, ಹೆಣ್ಣು ದೇಶದ ಕಣ್ಣು ವಿಷಯದ ಕುರಿತು ಸಿದ್ಧಪ್ಪ ಮುಗನೂರು, ‘ಬಸವ ತತ್ವದಲ್ಲಿ ಯುವಕರ ಪಾತ್ರ’ ವಿಷಯದ ಕುರಿತು ಸಿದ್ಧವೀರ ಸಂಗಮದ ಅನುಭಾವ ಮಾಡಲಿದ್ದಾರೆ.

ಸಂಜೆ 6 ಗಂಟೆಗೆ ನಡೆಯುವ 15ನೇ ಜ್ಯೋತಿ ಯಾತ್ರೆ ಸಮಾರೋಪ ಸಮಾರಂಭ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮತ್ತು ಪೂಜ್ಯ ಶ್ರೀ ಸದ್ಗುರು ಸತ್ಯಾದೇವಿ ಮಾತಾಜಿ ಹಾಗೂ ಅನುಭವ ಮಂಟಪದ ಶಿವಾನಂದ ಸ್ವಾಮಿಗಳು ದಿವ್ಯ ನೇತೃತ್ವ ವಹಿಸಲಿದ್ದಾರೆ. ನಗರದ ಪೌರಾಯುಕ್ತರಾದ ರಾಜು ಬಣಕಾರ ದೀಪ ಪ್ರಜ್ವಲನೆ ಮಾಡಲಿದ್ದು, ವಿಶೇಷ ಆಹ್ವಾನಿತರಾಗಿ ಮಾಜಿ ಸಚೀವರಾದ ರಾಜಶೇಖರ ಪಾಟೀಲ, ಮಲ್ಲಿಕಾರ್ಜುನ ಖೂಬಾ, ಪ್ರದೀಪ ವಾತಡೆ, ಗುಂಡುರೆಡ್ಡಿ, ಡಾ. ಗವಿಸಿದ್ಧಪ್ಪ ಪಾಟೀಲ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ದಿಲೀಪ ಶಿಂದೆ, ಗೌರವಾಧ್ಯಕ್ಷರಾದ ಲಕ್ಷ್ಮಣರಾವ್ ಹಂದಿಕೇರಿ, ಪ್ರಧಾನ ಕಾರ್ಯದರ್ಶಿಯಾದ ನಾಗಶೆಟ್ಟಿ ಪಾಟೀಲ, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ,
ಬಸವ ತತ್ವ ಪ್ರಚಾರ ಮತ್ತು ಪ್ರಸಾರ ಕೇಂದ್ರದ ಜಯಪ್ರಕಾಶ ಸದಾನಂದೆ, ಸಂಗಮೇಶ ತೊಗರಖೇಡೆ, ದಾನಮ್ಮ ಬಳಗದ ಗಿರಿಜಾ ಸಿದ್ದಣ್ಣ, ಸುಮಿತ್ರಾದೇವಿ ದಾವಣಗಾವೆ ಸೇರಿದಂತೆ ಅನೇಕ ಶರಣರು ಉಪಸ್ಥಿತರಿದ್ದರು.

ಈಗಾಗಲೇ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಐದು ಜಿಲ್ಲೆಯಲ್ಲಿ ಪ್ರಚಾರ ಮಾಡಲಾಗಿದ್ದು ಸಾವಿರಾರು ಬಸವ ಭಕ್ತರು ಹಾಗೂ ದಾನಮ್ಮನ ಭಕ್ತರು ಆಗಮಿಸಲಿದ್ದು ಅವರಿಗೆ ಉಳಿದುಕೊಳ್ಳಲು ತಾತ್ಕಾಲಿಕ ಶಾಮಿಯಾನ್ ಟೆಂಟ ಹಾಕಿಸಲಾಗುತ್ತಿದೆ, ಬಸವಧರ್ಮ ಪೀಠ ಮತ್ತು ಅನುಭವ ಮಂಟಪ ಹಾಗೂ ಯಾತ್ರಿಕ್ ನಿವಾಸದಲ್ಲಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!