
ಶ್ರೀ ಶ್ರೀ ಶ್ರೀ ಮಹರ್ಷಿ ವಾಲ್ಮೀಕಿ ಆರ್ ಸಿ ನಾಯಕ ಜನಸೇವೆ ಶೈಕ್ಷಣಿಕ ಟ್ರಸ್ಟ್ (ರಿ.) ವತಿಯಿಂದ ದಿನಾಂಕ 03.04.2026 ರಂದು ಬೆಳಿಗ್ಗೆ 10.30 ಕ್ಕೆ ದ್ವಿತೀಯ ಬಾರಿಗೆ ಮಕ್ಕಳ ಶಿಕ್ಷಣಕ್ಕೆ ಉಚಿತ ಬೇಸಿಗೆ ಶಿಬಿರ ಉದ್ಘಾಟನೆ.
ಯಾದಗಿರಿ :ಸುರಪುರ ನಗರದ ಜಲಾಲ್ ಮೋಹನದಲ್ಲಿರುವ ಸ್ವಾಮಿ ಶ್ರೀ ಪರಂಕುಶ ಮಠದಲ್ಲಿ ರೈತಾಪಿ ಕುಟುಂಬದ ಬಡ ವಿದ್ಯಾರ್ಥಿಗಳಿಗೋಸ್ಕರ ಉಚಿತ ಬೇಸಿಗೆ ವಿವಿಧ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ
ಡಾ. ರಾಜಾ ವೆಂಕಪ್ಪ ನಾಯಕ ತಾಲೂಕ ವೈದ್ಯಾಧಿಕಾರಿಗಳು ಸುರಪುರ ಇವರು ” ಶಿಕ್ಷಣ ಅಮೂಲ್ಯವಾದ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು, ಎಲ್ಲರೂ ಶಿಕ್ಷಣ ಪಡೆಯುವುದು ನಿಮ್ಮ ಹಕ್ಕು ಈ ರೀತಿ ಉಚಿತವಾಗಿ ನನ್ನ ಅಳಿಯ ಆರ್ ಸಿ ನಾಯಕ ಪುಟ್ಟು ಅವರು ಉಚಿತ ಶಿಬಿರ ಮಾಡಿರೋದು ನಮ್ಮ ಕುಟುಂಬಕ್ಕೆ ಹೆಮ್ಮೆಯ ವಿಷಯ ಎಂದು ಹೇಳಿದರು.
ವೈದ್ಯಶ್ರೀ ಆನಂದ ಡಿ ಹೇರೂರು ಅವರು ಮಾತನಾಡಿ ಶಿಕ್ಷಣದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು, ನಮ್ಮಿಂದ ಆದಷ್ಟು ಸಮಾಜ ಸೇವೆ ಮಾಡಬೇಕು ಎಂದು ಹೇಳಿದರು. ಆರ್ ಸಿ ನಾಯಕ ಅವರ ಸಮಾಜಕೆ ಮತ್ತು ಯುವ ಜನರಿಗೆ ಮಾದರಿ ಕೆಲಸ ಮಾಡುತ್ತಿದ್ದಾರೆ ಅಂತವರಿಗೆ ತಾವೆಲ್ಲರೂ ಸಹಕರಿಸಿದ್ರಿ ಇನ್ನೂ ಅನೇಕ ರೀತಿಯ ಸಮಾಜ ಸೇವೆ ಮಾಡಲು ಉತ್ಸಾಹ ಬರುತ್ತದೆ ಎಂದರು.
ಟ್ರಸ್ಟಿನ ಅಧ್ಯಕ್ಷರಾದ ಆರ್ ಸಿ ನಾಯಕ ಅವರು ಮಾತನಾಡಿ ಸಮಾಜ ನಮಗೆ ಏನು ಕೊಟ್ಟಿದೆ ಅನ್ನೋದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಅನ್ನುವುದು ಮುಖ್ಯ, ಹುಟ್ಟುವ ಸೂರ್ಯ ಯಾರನ್ನೂ ಕೇಳಿ ಹುಟ್ಟೋದಿಲ್ಲ ಬೀಸುವ ಗಾಳಿ ಯಾರನ್ನು ಕೇಳಿ ಬೀಸುವುದಿಲ್ಲ ತಮ್ಮ ಕರ್ತವ್ಯವನ್ನು ಮಾಡುತ್ತಲೇ ಇರುತ್ತವೆ. ನಮ್ಮದು ರಾಜವಂಶದ ಕುಟುಂಬವಾಗಿದ್ದು ಹಿಂದಿನ ಕಾಲದಲ್ಲಿ ನಮ್ಮ ಪೂರ್ವಿಕರು ಸೈನಿಕರ ಕೈಯಲ್ಲಿ ಕತ್ತಿ ಕೊಟ್ಟು ಶಸ್ತ್ರಾಭ್ಯಾಸ ಮಾಡಿಸುತ್ತಿದ್ದರು ನಾನು ಕತ್ತಿಗಿಂತ ಹರಿತವಾದ ಲೇಖನಿಯನ್ನು ಕೊಟ್ಟು ವಿದ್ಯಾವಂತ ಸೈನಿಕರನ್ನು ರೆಡಿ ಮಾಡಿ ಈ ಸಮಾಜದ ಕೊಳಕು ನಿರ್ಮೂಲನೆ ಮಾಡುವ ಆಸೆ ಹೊಂದಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ರಾಜಾ ಸುಭಾಶ್ಚಂದ್ರ ನಾಯಕ ಹುಲಿಹೈದರ್ ಸಂಸ್ಥಾನ ,ರಾಜಾ ಮದನ್ ಗೋಪಾಲ ನಾಯಕ, ಡಾ. ಕನಕ ರೆಡ್ಡಿ ,ಹುಲುಗಪ್ಪ ಪೂಜಾರಿ ,
ಶ್ರೀಹರಿ ಆದೋನಿ ,ವೈದ್ಯ ರಾಘವೇಂದ್ರ ಸುಗಂಧಿ ,
ರಾಜಾ ಉಡಚಪ್ಪ ನಾಯಕ,ಎಸ್ ಎಮ್ ಬುಖಾರಿ ,
ಅಬಿದ್ ಹುಸೇನ್ ಪಗಡಿ, ಸಂತೋಷ್ ನಾಯಕ,
ಹರ್ಷವರ್ಧ ನಾಯಕ,ಆಕಾಶ್ ,ಭಾರತ್,ಪ್ರಜ್ವಲ,
ಪ್ರಕಾಶ್,ಯಂಕಪ್ಪ ,ಹುಲಗಪ್ಪ, ಅಂಬರೀಶ್
ಶಿಕ್ಷಕ ವೃಂದ ಸೇರಿದಂತೆ ಮಕ್ಕಳ ಪಾಲಕರು ಭಾಗವಹಿಸಿದ್ದರು.
ವರದಿ ಹನುಮಂತಪ್ಪ ನಾಯಕ




















