ಬಾಗಲಕೋಟೆ ಜಿಲ್ಲೆಯ ಮುಧೋಳ : ಇಂದಿನ ನಮ್ಮ ಮಕ್ಕಳಿಗೆ ನೈತಿಕ ಸಂಸ್ಕಾರವನ್ನು ಕೊಡುವುದರೊಂದಿಗೆ ನಾಡಿನ ಆಸ್ತಿಯನ್ನಾಗಿ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಪಾಲಕರ ಮೇಲಿದೆ ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು. ಅವರು ಮುಧೋಳ ತಾಲೂಕಿನ ಸುಕ್ಷೇತ್ರ ಶಿರೋಳದ ಮಾಣಿಕ್ಯಶೆಟ್ಟಿ ಕುಟುಂಬದ ಸಂಗಪ್ಪ ಹಾಗೂ ಗಿರೀಶ್ ಸಹೋದರರ ಮಹಾಮನೆಯಲ್ಲಿ ಮರೆಗುದ್ದಿಯ ಅಡವಿ ಸಿದ್ದೇಶ್ವರ ಮಠದ ಡಾ.ಶ್ರೀನಿರುಪಾದಧೀಶ್ವರ ಮಹಾ ಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನಡೆದ ಉಡದಟ್ಟಿ ಉತ್ಸವದಲ್ಲಿ ಭಾಗವಹಿಸಿ ಸಾಂಪ್ರದಾಯಿಕ ಸಂಭ್ರಮದಲ್ಲಿ ಮಾತನಾಡಿದರು. ಸಂಭ್ರಮದಲ್ಲಿ ಮಿಂದೆದ್ದ ಮಾಣಿಕ್ಯಶೆಟ್ಟಿ ಕುಟುಂಬವು ಹಲವು ಭಾಗಗಳಿಂದ ಬಂದ ಪೂಜ್ಯರನ್ನು ಆದರದಿಂದ ಗೌರವಿಸಿ ಪಾದಪೂಜೆ ಮಾಡಿಕೊಂಡು ಗೌರವಿಸಿದರು.
ಈ ಸಂದರ್ಭದಲ್ಲಿ ಅಂಜಲಿ, ಭಾಗ್ಯಶ್ರೀ, ಆನಂದ, ಆಕಾಶ, ಸಮಥ೯ ಈ ಐವರು ಮಕ್ಕಳನ್ನು ಗೌರವಿಸಿ ಮಾತನಾಡಿದ ಡಾ.ನಿರುಪಾದೀಶ್ವರರು ಶರಣು ಸಂಸ್ಕೃತಿಯಲ್ಲಿ ಬದುಕು ಸಾಗಿಸಿ ಎಂದು ಅವರು ಮೊಬೈಲ್ ಬಿಡಿ, ಪುಸ್ತಕ ಹಿಡಿ ಎಂದು ಸೂಚಿಸಿದರು. ಮುಧೋಳದ ವೆಂಕಣ್ಣ ಮಹಾರಾಜರು ,ಶಿರೋಳದ ಬಸಪ್ಪಜ್ಜ ,ಮಂಟೂರಿನ ಈರಯ್ಯ ಸ್ವಾಮೀಜಿ, ಭನಗೂಳಿಯ ನಾರಾಯಣ ಮಹಾರಾಜರು, ರಬಕವಿಯ ಹನುಮಂತ ಕೊಡಗಾನೂರ ಗುರುಸ್ವಾಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಯಮಿ ಸಂಗಮೇಶ ನಿರಾಣಿ, ಹಿರಿಯರಾದ ಶಿವಪ್ಪ ಪವಾಡಶೆಟ್ಟಿ ಪೋಲಿಸ್ ಗೌಡ , ಶಂಕರ ಚಿಮ್ಮಡ ಸೇರಿದಂತೆ ಅನೇಕರು ಶುಭ ಹಾರೈಸಿದರು.
ಬಂದವ್ವ ಸಿದ್ದರಾಮಪ್ಪ ಮಾಣಿಕ್ಯಶಟ್ಟಿ ಹಾಗೂ ಪಾರವ್ವ ಮಹಾದೇವಪ್ಪ ಮುರನೂರ ಸ್ವಾಗತಿಸಿ ವಂದಿಸಿದರು.




















