ಸಿರುಗುಪ್ಪ – ತಾಲೂಕು ದಾಸಾಪುರ ಗ್ರಾಮದಲ್ಲಿ ಬಸವರಾಜ ಎನ್ನುವವರ ಕುರಿಗಳ ಹಿಂಡಿನ ಮೇಲೆ ಮಂಗಳವಾರ ಬೆಳಗಿನ ಜಾವ ತೋಳದ ದಾಳಿಯಿಂದ 12 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ 28 ಕುರಿಗಳಲ್ಲಿ 12 ಕುರಿ ಮೃತಪಟ್ಟಿವೆ. ಉಳಿದ ಕುರಿಗಳು ಗಾಯಗೊಂಡಿವೆ ಎಂದು ಕುರಿಗಳ ಮಾಲೀಕ ಬಸವರಾಜ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ಮಾಹಿತಿ ಪಡೆದ ಪಶು ವೈದ್ಯಕೀಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ಕುಬೇರ ಮತ್ತು ಕಿರಿಯ ಪಶು ವೈದ್ಯಾಧಿಕಾರಿ ವಿಜಯಕಾಂತ್ ಪೊಲೀಸ್ ಇಲಾಖೆಯ ಹೆಡ್ ಕಾನ್ಸ್ ಟೆಬಲ್ ಶರಣಪ್ಪ ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಪಡೆದುಕೊಂಡರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















