ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

“ಬಸವ”ಜಯಂತಿ ನಿಮಿತ್ಯ ಶರಣರ ಜೀವನ ಚರಿತ್ರೆ ಮುಗಳಖೋಡದಲ್ಲಿ

ಮುಧೋಳ : ಇದೇ ಏಪ್ರಿಲ್ ಸೋಮವಾರ ದಿ.20 ರಂದು ಮುಂಜಾನೆ 11 ಗಂಟೆಗೆ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ವಿಶ್ವಮಾನ್ಯ ಪುರುಷ. ಭಕ್ತಿ ಭಂಡಾರಿ. ಬಸವಣ್ಣವರ ಜಯಂತೋತ್ಸವ-ನಾಮಕರಣ.ಜನಪದ ಸಂಗೀತ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮವು ಜರುಗಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಎಲ್ ಶ್ರೀನಿವಾಸ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡುತ್ತಾ ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಅನುಭಾವಿ ಶರಣಶ್ರೀ ಶ್ರೀಶೈಲ ಪಟ್ಟಣಶೆಟ್ಟಿಯವರು ವಹಿಸುವರು. ಆಯ್‌ ಎಸ್ ಮಂಟೂರ ಗ್ರಾಮೀಣಾಭಿವೃದ್ಧಿ. ಜನ ಸೇವಾ ಸಂಸ್ಥೆಯ ಮುಖಂಡರಾದ M.ಕೃಷ್ಣೇಗೌಡ ಅವರು ಜ್ಯೋತಿ ಬೆಳಗಿಸುವರು.ಸಾಮಾಜಿಕ ಚಿಂತಕ ಪಿ.ಬಿ.ಸುಣಗಾರ. ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ಶಂಕರಗೌಡ ಪಾಟೀಲ.ನಿಂಗನಗೌಡ ಮಂಟೂರ ಅವರ ಉಪಸ್ಥಿತಿಯಲ್ಲಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಾನಿಧ್ಯದಲ್ಲಿ ಶ್ರೀ ಮಹಾಳಿಂಗೇಶ್ವರ ದೇವರ ಅಚ೯ಕ ಪೂಜ್ಯರಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ತನ್ನಿಮಿತ್ಯ ಪೂವ೯ಭಾವಿಯಾಗಿ ರವಿವಾರ ದಿ‌ 12 ರಿಂದ ರವಿವಾರ ದಿ.19 ರ ವರೆಗೆ ಪ್ರತಿ ದಿನ ಸಂಜೆ 8.15 ರಿಂದ 9.15 ರ ವರೆಗೆ ಪ.ಪೂ.ಶರಣಬಸವ ಶಾಸ್ತ್ರಿಗಳಿಂದ “ಶರಣರ ಜೀವನ ಚರಿತ್ರೆ” ಪ್ರವಚನ ಜರುಗಲಿದೆ ಎಂದು ಶ್ರೀನಿವಾಸ ಪ್ರಸಾದ್ ಅವರು ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!