ಕಲಬುರ್ಗಿ :ಕಾಳಗಿ ತಾಲೂಕಿನ ಅರಜಂಬಗಾ ಗ್ರಾಮದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಪ್ರದೀಪ್ ಎಸ್ ಕೆ, ರವರ ಜನ್ಮದಿನದ ಪ್ರಯುಕ್ತ ಬೇಸಿಗೆ ರಜೆ ಕಾರಣ ಮುಂಚಿತವಾಗಿ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ನುಗಳನ್ನು ವಿತರಣೆ ಮಾಡಲಾಯಿತು.
ಭಾರತೀಯ ಸಂಸ್ಕೃತಿಯ ಪ್ರಕಾರ ಹುಟ್ಟುಹಬ್ಬವನ್ನು ಹಳೆಯ ಕಾಲದಲ್ಲಿ ದೇವರಿಗೆ ನಮಸ್ಕರಿಸಿ ಆ ದಿನದಂದು ಅನ್ನದಾನವನ್ನು, ಕಷ್ಟದಲ್ಲಿರುವ ಸಹಾಯ ಮಾಡುವುದು ನಡೆದುಕೊಂಡ ಪದ್ಧತಿಯಾಗಿರುತ್ತದೆ. ಈಗಿನ ಕಾಲದಲ್ಲಿ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸುತ್ತಾರೆ. ಆದರೆ ಈಗಿನ ಕಾಲದಲ್ಲಿ ಕೆಲವು ಜನ ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಪ್ರದೀಪ ಎಸ್ ಕೆ ರವರು ಮುಂಚಿತವಾಗಿ ತಮ್ಮ ಹುಟ್ಟು ಹಬ್ಬವನ್ನು ಮಕ್ಕಳಿಗೆ ನೋಟ್ ಪುಸ್ತಕ ಕೊಡುವುದರ ಮೂಲಕ ಆಚರಿಸಿದರು.
ಈ ವೇಳೆ ಶಾಲೆಯ ಮುಖ್ಯ ಶಿಕ್ಷಕಿಯಾಗಿರುವಂತ ರೇಣುಕಾ ಭರಣಿ ಮೇಡಂ ಅವರು ಮತ್ತು ಶಾಲೆ ಉಪಾಧ್ಯಕ್ಷರು ಶಿವಕುಮಾರ್ ಬೆಳಗುಂಪಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಪ್ರದೀಪ್ ಎಸ್ ಕೊಡದೂರ ಸಹಶಿಕ್ಷಕರು ಹಣಮಂತ ಎನ್ ಹೊಳೆನೂರು , ಮಾಜಿ ಗ್ರಾಮಪಂಚಾಯಿತಿ ಸದಸ್ಯರು ಮಂಜುನಾಥ್ ಬಿ ಕೊಡದೂರ ದಲಿತ್ ಯುವ ಮುಖಂಡರು ಜೈಭೀಮ್ ಈ ಸಂಗನ ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್




















