ಹಾಸನ ಜಿಲ್ಲೆ ಅರಕಲಗೂಡು ತಾಲೂಕು ಕಚೇರಿಯ ಪಕ್ಕದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಅಳವಡಿಸಿರುವ ಸ್ತೂಪದಲ್ಲಿ
ಬೌದ್ಧ ಧರ್ಮ ಸ್ವೀಕಾರ ಮಾಡಿರುವ ಅಂಬೇಡ್ಕರ್ ಅವರ ಸ್ತೂಪದಲ್ಲಿ ಧರ್ಮ ಚಕ್ರಗಳೇ ಕಾಣೆಯಾಗಿವೆ ಹಾಗೂ ಅರಳಿ ಮರದ ಎಲೆಗಳು ಕೈ ಬಿಟ್ಟಿರುವುದು ಮತ್ತೆ ಅವರನ್ನು ಹಿಂದೂ ಧರ್ಮಕ್ಕೆ ತಳ್ಳಲ್ಪಡುತ್ತಿದೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅವರು ಇರುವ ಜಾಗವನ್ನೆಲ್ಲಾ ಬೌದ್ಧ ಧರ್ಮವಾಗಿ ಪರಿವರ್ತನೆ ಮಾಡಿಕೊಂಡು ಜೀವನವನ್ನು ನಡೆಸುತ್ತಿದ್ದರು. ಆದರೆ ನಮ್ಮಗಳ ತಿಳುವಳಿಕೆ ಮಟ್ಟ ಕುಗ್ಗಿರುವುದರಿಂದ ನಮಗೆ ಅವರ ಅನುಸರಣೆ ತಿಳಿಯುತ್ತಿಲ್ಲ ಈಗಲಾದರೂ ನಾವು ಎಚ್ಚೆತ್ತುಕೊಂಡು ಅವರು ಇರುವ ಜಾಗದಲ್ಲಿ ಬೌದ್ಧ ಧರ್ಮದ ಧರ್ಮ ಚಕ್ರ ಹಾಗೂ ಅರಳಿ ಮರದ ವಿಶೇಷ ಎಲೆಯ ಚಿತ್ರಗಳು ಅಥವಾ ಅರಳಿ ಮರದ ಚಿತ್ರಗಳನ್ನು ಕೂಡ ಬರೆಸುವುದು ನಮ್ಮ ಜವಾಬ್ದಾರಿಯಾಗಿದೆ ದಯವಿಟ್ಟು ಯಾರೂ ತಪ್ಪಾಗಿ ತಿಳಿದುಕೊಳ್ಳಬೇಡಿ ಅವರ ಮಾರ್ಗವನ್ನು ಅನುಸರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ಹಾಗಾಗಿ ಮುಂದಿನ ದಿನಗಳಲ್ಲಿ ಅರಕಲಗೂಡಿನ ತಾಲೂಕು ಕಚೇರಿಯಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ತೂಪದಲ್ಲಿ ಧರ್ಮ ಚಕ್ರಗಳನ್ನು ಅಳವಡಿಸಬೇಕಾಗಿ ಕೇಳಿಕೊಳ್ಳುತ್ತೇನೆ.
- ಸುಧೀಂದ್ರ ಡಿ. ಅರಕಲಗೂಡು




















