ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮುಗಳಖೋಡದಲ್ಲಿ ಏ.20 ರಂದು ಬಸವ ಜಯಂತಿ

ಬಾಗಲಕೋಟೆ/ ಮುಧೋಳ : ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಸೋಮವಾರ ದಿ. 20 ರಂದು ವಿಶ್ವಮಾನ್ಯ ಪುರುಷ ” ಬಸವಣ್ಣ”ನವರ ಜಯಂತೋತ್ಸವ ಸಮಾರಂಭವು ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಯುವ ಮುಖಂಡ ಆಶ್ರಮದ ಪೂಜ್ಯರಾದ ಕುಮಾರ ಗುರುಪ್ರಸಾದ ಸ್ವಾಮೀಜಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪತ್ರಿಕೆಯೊಂದಿಗೆ ಮಾತನಾಡುತ್ತಾ ಬೆಳಿಗ್ಗೆ 8 ಗಂಟೆಗೆ ಭಕ್ತಿಭಂಡಾರಿ ಬಸವಣ್ಣವರ ಭಾವಚಿತ್ರದ ಉತ್ಸವ ಜರುಗುವುದು. ವಿವಿಧ ಕಲಾವಿದರಿಂದ ಭಜನೆ .ವಚನ ಗಾಯನ. ತತ್ವಪದಗಳ ಸೇವೆ ಜರುಗುವುದು. ನಂತರ ಭಕ್ತಿ ಭಾವದಿಂದ ಅಪ್ಪ ಬಸವಣ್ಣ ಅವರಿಗೆ ಪುಷ್ಪಾರ್ಚನೆ. ಮುತ್ತೈದೆಯರಿಂದ ಆರತಿ. ಜೋಗುಳ ಹಾಡುವುದು. ನಾಮಕರಣ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದ ಸನ್ನಿಧಾನವನ್ನು ‌ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪರಮಪೂಜ್ಯ ಶ್ರೀ ಶರಣಬಸವ ಶಾಸ್ತ್ರಿಗಳು ವಹಿಸುವರು. ನಾವಲಗಿಯ ಹಿರಿಯ ಶರಣ ಶ್ರೀ ಶ್ರೀಶೈಲ ಪಟ್ಟಣಶೆಟ್ಟಿ ಅವರು ಅಧ್ಯಕ್ಷತೆಯನ್ನು ವಹಿಸುವರು. ಹಿರಿಯರಾದ ಮಲ್ಲು ಮುಚ್ಚಂಡಿ. ಪಿ .ಬಿ ಸುಣಗಾರ.ರಂಗನಗೌಡ ಮಂಟೂರ. ಶಂಕರಗೌಡ ಪಾಟೀಲ್. ನಿಂಗನಗೌಡ ಮಂಟೂರ ಉಪಸ್ಥಿತರಿರುವರು.
ಆಯ್.ಎಸ್. ಮಂಟೂರ ಗ್ರಾಮೀಣಾಭಿವೃದ್ಧಿ ಜನ ಸೇವಾ ಸಂಸ್ಥೆಯ ಮುಖಂಡ ಕೃಷ್ಣೇಗೌಡ ಮಂಟೂರ ಜ್ಯೋತಿಯನ್ನು ಬೆಳಗಿಸುವರು.
ಬಸವಣ್ಣವರನ್ನು ಕುರಿತು ವಿಶೇಷ ಉಪನ್ಯಾಸಗಳು ಜರುಗುವುದು.
ಇದೇ ಸಂದರ್ಭದಲ್ಲಿ ಸಾಧಕರನ್ನು ಸತ್ಕರಿಸಲಾಗುವುದು ಎಂದು ಗುರುಪ್ರಸಾದ್ ಸ್ವಾಮೀಜಿ ಅವರು ತಿಳಿಸಿದರು. ಪ್ರತಿಷ್ಠಾನದ ಮುಖಂಡರಾದ ಶ್ರೀಶೈಲ ಪಾಟೀಲ ಇದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!