ಯಡ್ರಾಮಿ: ತಾಲೂಕಿನ ಇಜೇರಿ ಗ್ರಾಮದಲ್ಲಿ ಅಕ್ಕ-ತಂಗಿಯರ ಸಂಶಯಾಸ್ಪದ ಸಾವಿನ ಕುರಿತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಭೋವಿ ವಡ್ಡರ ಜನಪರ ಕಲ್ಯಾಣ ಸಂಘದ ವತಿಯಿಂದ ನೊಂದ ಕುಟುಂಬಕ್ಕೆ ಭೇಟಿಯನ್ನು ನೀಡಿ ಸಾಂತ್ವನ ಹೇಳಲಾಯಿತು. ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷ ಸಿದ್ರಾಮ ದಂಡಗುಲ್ಕರ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಈ ದುರ್ಘಟನೆಯ ಕುರಿತು ಮಾಹಿತಿಯನ್ನು ಪಡೆದರು. ಮೇಲ್ನೋಟಕ್ಕೆ ಇದು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಪ್ರಕರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆಯವರು ಸಮಗ್ರ ತನಿಖೆಯನ್ನು ನಡೆಸಿ ಸತ್ಯಾಂಶ ಹೊರ ತರಬೇಕೆಂದು ಈ ಸಂದರ್ಭದಲ್ಲಿ ಆಗ್ರಹಿಸಿದರು. ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಕೂಡ ಭೇಟಿ ನೀಡಿದ ಹಿನ್ನೆಲೆಯಲ್ಲಿ, ಪ್ರಕರಣದ ಗಂಭೀರತೆಯನ್ನು ವಿವರಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು. ಈ
ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ಮಾನವ ಹಕ್ಕು ಸಂರಕ್ಷಣೆ ಸಂಸ್ಥೆಯ ಕಲ್ಯಾಣ ಕರ್ನಾಟಕದ ಅಧ್ಯಕ್ಷರಾದ ಸುಭಾಷ್ ಬನ್ನಪಟ್ಟೆ, ಕಾರ್ಯಾಧ್ಯಕ್ಷ ಈರಣ್ಣ ಹಲ್ಕಟ್ಟಿ, ಉಪಾಧ್ಯಕ್ಷ ರಾಜು ಧಾಭಿಮಾನಿ ಸೇರಿದಂತೆ ಉಪಸ್ಥಿತರಿದ್ದರು.ಹಾಗೂ ಗ್ರಾಮಸ್ಥರೂ ಈ ಸಂದರ್ಭದಲ್ಲಿ ಭಾಗವಹಿಸಿ, ಘಟನೆಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಅಧ್ಯಕ್ಷರು ಇಂತಹ ದುಃಖದ ಸಂದರ್ಭದಲ್ಲೂ ನೊಂದ ಕುಟುಂಬಕ್ಕೆ ಭೇಟಿ ನೀಡಿ ಧೈರ್ಯ ತುಂಬಿರುವುದು ಸಮಾಜಕ್ಕೆ ಬಲ ನೀಡಿದಂತಾಗಿದೆ. ಆದ್ರೆ ಇದುವರೆಗೂ ತಾಲೂಕಿನ ಶಾಸಕರಾದ ಡಾ. ಅಜಯ್ ಸಿಂಗ್ ಅವರು ನೊಂದ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ಧನ ವಿತರಿಸಬೇಕಾಗಿತ್ತು ಆದರೆ ಶಾಸಕರು ಭೇಟಿ ನೀಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ ಅದೇ ರೀತಿಯಾಗಿ ತಾಲೂಕಿನ ಜನಪ್ರತಿನಿಧಿಗಳು ಸಹಿತ ಭೇಟಿ ನೀಡದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
- ಕರುನಾಡ ಕಂದ ಪತ್ರಿಕೆ




















