ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ. ಈ ದೇವಾಲಯ ಮತ್ತು ಬಳೆಮಂಟಪವನ್ನು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ (ಸು. ಕ್ರಿ. ಶ. 16ನೇ ಶತಮಾನ) ನಿರ್ಮಿಸಲಾಯಿತು.
ಇದನ್ನು ಸಿಂಗದೇಪ ದೇವಭೂಪಾಲ ಎಂಬ ಸ್ಥಳೀಯ ಸಾಮಂತನು ನಿರ್ಮಿಸಿದನು. “ಬಳೆಮಂಟಪ” ಎಂಬ ಹೆಸರಿನ ಕಾರಣ ಮಂಟಪದಲ್ಲಿ ಕಲ್ಲಿನಿಂದ ಕೆತ್ತಿದ ಬಳೆ ಆಕಾರದ ಸರಪಳಿ ಮತ್ತು ವಲಯಾಕಾರ ಶಿಲ್ಪಗಳು ಇದ್ದುದರಿಂದ ಇದನ್ನು ಬಳೆ ಮಂಟಪ ಎಂದು ಕರೆಯುತ್ತಾರೆ. ಈ ಶಿಲ್ಪಗಳು ಕಲ್ಲಿನಿಂದಲೇ ಒಂದೇ ತುಂಡಿನಲ್ಲಿ ಮಾಡಲ್ಪಟ್ಟಿರುವುದು ಅದರ ವಿಶೇಷತೆ.
ವಿಜಯನಗರ ಶೈಲಿಯ ಶಿಲ್ಪಕಲೆ
ಸುಂದರ ಕಂಬಗಳು ಮತ್ತು ಶಿಲ್ಪಗಳು
ಕಲ್ಲಿನ ಬಳೆ ಆಕಾರದ ಅಲಂಕಾರ ಯಳಂದೂರಿನ ಬಳೆ ಮಂಟಪ ಗೌರೀಶ್ವರ ದೇವಾಲಯದ ಒಂದು ಪ್ರಸಿದ್ಧ ಶಿಲ್ಪಕಲೆಯ ಮಂಟಪವಾಗಿದೆ.
- ಡಾ.ಸುರೇಶ್ ಎಸ್. ವಡಗಲಪುರ.




















