ಸಿರುಗುಪ್ಪ – 12 ನೇ ಶತಮಾನದಲ್ಲಿ ಬಸವಾದಿ ಶರಣರು ಕಲ್ಯಾಣದಲ್ಲಿ ಸಮಾನತೆಯ ಸಂದೇಶವನ್ನು ಸಾರಿದ್ದಾರೆ ಮಹಿಳೆಯರಿಗೆ ಆದ್ಯತೆ ನೀಡುವ ಮೂಲಕ ಸಮಾಜದಲ್ಲಿ ಸಮತೋಲನವನ್ನು ಸ್ಥಾಪಿಸಿದ್ದಾರೆ ಎಂದು ಅಭಿನವ ಮಹಾಂತ ಸ್ವಾಮೀಜಿ ಅವರು ಹೇಳಿದರು.
ಸಿರುಗುಪ್ಪ ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಬಸವ ಸಂದೇಶ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಬಸವಣ್ಣನವರ ವಚನಗಳು ಮಾನವ ಜೀವನಕ್ಕೆ ದಿಕ್ಕು ತೋರಿಸುವಂತಿದೆ ಅವುಗಳನ್ನು ಆಲಿಸುವುದರಿಂದ ಮಾನವನಿಗೆ ಉತ್ತಮ ಬದುಕಿನ ಮಾರ್ಗ ಸಿಗುತ್ತದೆ ಎಂದರು ಶರಣಗಿರಿ ಸಂಸ್ಥಾನ ಮಠದ ಹಾಲ್ವಿ ಶ್ರೀಗಳು ಬೂದುಗುಂಪೆ ಸಿದ್ದೇಶ್ವರ ಸ್ವಾಮೀಜಿ ಗುರುಬಸವ ಮಹಾಮಠದ ಬಸವಭೂಷಣ ಸ್ವಾಮೀಜಿ ರೈಸ್ ಮಿಲ್ ಗಳ ಮಾಲೀಕರ ಸಂಘದ ಅಧ್ಯಕ್ಷರು ಎನ್. ಜಿ. ಬಸವರಾಜಪ್ಪ ನೆಹರಂಗ ಕಲಾ ತಂಡದ ಅಧ್ಯಕ್ಷರು ಆರ್ ಸದಾಶಿವ ವೀರಶೈವ ತರುಣಾ ಸಂಘದ ಅಧ್ಯಕ್ಷರು ನಗರಸಭೆ ಮಾಜಿ ಸದಸ್ಯರು ಸುಳುವಾಯಿ ಮಲ್ಲಿಕಾರ್ಜುನ ಕಾರ್ಯದರ್ಶಿಗಳು ನಗರಸಭೆ ಮಾಜಿ ಅಧ್ಯಕ್ಷರು ಕೆ ವೆಂಕಟರಾಮ ರೆಡ್ಡಿ ಉಪಸ್ಥಿತರಿದ್ದರು.
ಕರ್ನಾಟಕ ಸರ್ಕಾರ ತಾಲೂಕು ಆಡಳಿತ ತಾಲೂಕು ಪಂಚಾಯತ್ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಜಿಲ್ಲಾ ಇಲಾಖೆ ನಗರ ಸಭೆ ಸಹ ಭಾಗಿತ್ವದಲ್ಲಿ ಸಿರುಗುಪ್ಪ ನಗರದ ಬಳ್ಳಾರಿ ರಸ್ತೆ ದೇವಲಾಪುರ ಕ್ರಾಸ್ ಬಳಿ ಬಸವೇಶ್ವರ ಸರ್ಕಲ್ ನಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಅವರ ಜಯಂತಿಯ ಅಂಗವಾಗಿ ಪ್ರತಿಮೆಗೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳು ವೀರಶೈವ ಲಿಂಗಾಯತರು ಗಣ್ಯ ಮಾನ್ಯರ ಸಮ್ಮುಖದಲ್ಲಿ ಮಾಲಾರ್ಪಣೆ ಪುಷ್ಪ ಅರ್ಪಿಸಿ ಗೌರವಿಸಿ ಸ್ಮರಿಸಿ ನಮನ ಸಲ್ಲಿಸಿದ ಕರ್ನಾಟಕ ರಾಜ್ಯದ ಜಗಜ್ಯೋತಿ ಬಸವೇಶ್ವರ ಕಾಯಕ ಶ್ರೀ ರಾಜ್ಯ ಪ್ರಶಸ್ತಿ ವಿಜೇತರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಶಾಂತಿ ಸಭೆ ಸದಸ್ಯರು ಸಮಾಜ ಸುಧಾರಕರು ಎ ಅಬ್ದುಲ್ ನಬಿ ಅವರು ಮಾತನಾಡಿ ಇವನಾರವ ಇವ ನಾರವ ಇವನಾರವ ಎನಿಸದಿರಯ್ಯ ಇವ ನಮ್ಮವ ಇವ ನಮ್ಮವ ಇವ ನಮ್ಮವ ಎನಿಸಯ್ಯ ಕೂಡಲ ಸಂಗಮ ದೇವನ ಮನೆಯ ಮಗನೆನಿಸಯ್ಯ ಎಂದು ಹಾಡಿ ಜನರಲ್ಲಿ ಮತ ಧರ್ಮಗಳ ಆಧಾರದಲ್ಲಿ ನಮ್ಮವರು ನಮ್ಮವ ರಲ್ಲದವರು ಎನ್ನುವ ಭೇದ ಬುದ್ಧಿಯಿಂದ ಅಳೆದು ಪ್ರತ್ಯೇಕಿಸುವ ಭೇದ ವಾದಿಗಳಿಗೆ ಎಲ್ಲರೂ ನಮ್ಮವರೇ ಎಲ್ಲರಿಗೂ ಒಬ್ಬನೇ ಪರಮಾತ್ಮನು ಬುದ್ಧಿ ಮಾತನ್ನು ಹೇಳಿದ ಬಸವಣ್ಣ ಕಾಯಕದಲ್ಲಿ ಮೇಲು ಕೀಳಿಲ್ಲ ಮಾಡುವ ಪ್ರತಿಯೊಂದು ಕೆಲಸಕ್ಕೆ ತನ್ನದೇ ಆದ ಗೌರವ ಹೊಂದಿದೆ ಕಾಯಕ ಯಾವುದಾದರೇನು ಅದು ಸತ್ಯ ಶುದ್ಧವಾಗಿರಬೇಕು ಮಾಡುವ ಕೆಲಸ ಪ್ರಾಮಾಣಿಕವಾಗಿರಬೇಕು ನಮ್ಮ ದುಡಿಮೆ ದಾಸೋಹ ನಮ್ಮ ನಡೆ ನುಡಿಗಳೇ ನಮ್ಮನ್ನು ಬದುಕಿಸುತ್ತವೆ ನಾವು ಮಾಡುವ ಕಾಯಕವೇ ನಮ್ಮನ್ನು ಎತ್ತರಕ್ಕೆ ತರುತ್ತದೆ ಎಂದು ತಮ್ಮ ಅಭಿಪ್ರಾಯ ವನ್ನು ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿಯವರು ವಿವರಿಸಿ ಹೇಳಿದರು.
ತಾಲೂಕ ಮಟ್ಟದ ಅಧಿಕಾರಿಗಳು ಗಣ್ಯ ಮಾನ್ಯರು ಸಾರ್ವಜನಿಕರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















