
ಬಳ್ಳಾರಿ / ಕಂಪ್ಲಿ : ಚಿಕ್ಕಜಂತಲ್ ಗ್ರಾಮದ ವಿನೋಬನಗರದಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅಂಗವಾಗಿ ಭಾವಚಿತ್ರ ಮೆರವಣಿಗೆ ಅತ್ಯಂತ ವಿಜೃಂಭಣೆಯಿಂದ ಸೋಮವಾರ ಜರುಗಿತು.
ಇಲ್ಲಿನ ಗ್ರಾಮದ ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ಆರಂಭಗೊಂಡ ಮೆರವಣಿಗೆ ಚಿಕ್ಕಜಂತಲ್ ಗ್ರಾಮದ ಮುಖಾಂತರ ಪ್ರಮುಖ ರಸ್ತೆಗಳಲ್ಲಿ ಸಾಗಿ, ವಿನೋಬನಗರ ಬಸವಣ್ಣ ದೇವಸ್ಥಾನ ಬಳಿ ಸಂಪನ್ನಗೊಂಡಿತು.
ಈ ಮೆರವಣಿಗೆಯಲ್ಲಿ ಸುಮಂಗಲಿಯರ ಕಳಸ, ತಾಷಾರಾಂಡೋಲ್, ಮಂಗಳವಾದ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಮೆರವಣಿಗೆ ರಂಗು ನೀಡಿದವು. ಧ್ವನಿ ವರ್ಧಕದ ಹಾಡುಗಳಿಗೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಜಯಂತಿ ಅಂಗವಾಗಿ ಒಂದು ಜೋಡಿ ವಧು-ವರರ ಉಚಿತ ವಿವಾಹ ನಡೆಸಲಾಯಿತು.
ಈ ಸಂದರ್ಭದಲ್ಲಿ ಛಲುವಾದಿ ಸಮಾಜದ ಮುಖಂಡರಾದ ಬಳ್ಳಾರಿ ಹುಲುಗಪ್ಪ, ಕಡೆಮನೆ ಈರಣ್ಣ, ಬಿ.ಮೋಹನ, ಕರಡಿ ದ್ಯಾವಣ್ಣ, ಬಿ.ಯಲ್ಲಪ್ಪ, ದಾಸರ ಯಂಕೋಬ, ಡಿ.ದ್ಯಾವಣ್ಣ, ಬಂಗಿ ವೆಂಕೋಬ, ಕೋಳಿ ರಮೇಶ, ಬಾವಿಕಟ್ಟೆ ಸುರೇಶ, ಇಟಗಿ ವಿರೇಶ, ಸಿ.ರಮೇಶ, ಕಾಲೇದ್ ಮಾರೆಪ್ಪ, ಸೋಮು, ದೊಡ್ಡ ರಾಮಮ್ಮ, ಬಿ.ಪಾರ್ವತೆಮ್ಮ ಸೇರಿದಂತೆ ಯುವಕರು, ಮಕ್ಕಳು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















