
ಕೊರಟಗೆರೆ :ಬಸವ ಜಯಂತಿಯಂದು ಏರ್ಪಡಿಸಿದ ಬಸವಣ್ಣನವರ ಭವ್ಯ ಮೂರ್ತಿಯ ಮೆರವಣಿಗೆ ಹಾಗೂ ಊರಿನ ಎತ್ತುಗಳ ಮೆರವಣಿಗೆಗೆ ಕೋಳಾಲಾ ಕ್ಷೇತ್ರದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಿ ಎನ್ ಕೃಷ್ಣಮೂರ್ತಿ ಅವರು ಸಂಕೇನಹಳ್ಳಿಗೆ ಆಗಮಿಸಿ ಹಳ್ಳಿಯ ಹಬ್ಬದ ಮೆರಗು ನೋಡಿ ಸಂತೋಷದಿಂದ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಪ್ರತಿ ವರ್ಷವೂ ಸಂಕೇನಹಳ್ಳಿ ಗ್ರಾಮದಲ್ಲಿ ಶ್ರೀ ಬಸವನ ಜಯಂತಿ ಪ್ರಯುಕ್ತ ಕಾರ್ಯಕ್ರಮ ಬಹಳ ಸಂಭ್ರಮ ಮತ್ತು ಸಡಗರದಿಂದ ಅದ್ದೂರಿಯಾಗಿ ನೆರವೇರಿಸುತಿದ್ದರು .ಈ ಬಾರಿ ಸಮಾಜ ಸೇವಕರು ಪೂಜೆಗೆ ಬಂದು ಜನರಿಗೆ ಬಸವಣ್ಣ ನವರ ಮೂಲಭೂತ ಸೌಲಭ್ಯಗಳ ಮೌಲ್ಯ, ಸಮಾನತೆ, ನ್ಯಾಯ, ಮಾನವೀತೆಯ ಸಂದೇಶಗಳ ಬಗ್ಗೆ ಬಸವಣ್ಣ ಅವರ ಮಾರ್ಗದರ್ಶನ ಬಗ್ಗೆ ಎಲ್ಲರಿಗೂ ತಿಳಿಸಿದರು.
ಪಿಎನ್ ಕೃಷ್ಣಮೂರ್ತಿ ಸ್ವತಹ ಊರಿನ ಗ್ರಾಮಸ್ಥರಿಗೆ ಮಹಿಳೆಯರಿಗೂ, ಭಕ್ತರಿಗೂ ಪಾನಕ ಮತ್ತು ಹೆಸರುಬೇಳೆಯನ್ನು ಹಂಚುವುದರ ಮೂಲಕ ಎಲ್ಲರ ಪ್ರೀತಿಗೆ ಅವರು ಪತ್ರರಾದರು .
ಇದೇ ಸಂದರ್ಭದಲ್ಲಿ ಬಸವ ಜಯಂತಿ ಹಬ್ಬದ ಪ್ರಯುಕ್ತ ಈ ಸಂದರ್ಭದಲ್ಲಿ ಅವರ ಅಪಾರ ಅಭಿಮಾನಿ ಬಳಗದ ಮೆಡಿಕಲ್ ಹನುಮಂತು. ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ನರಸಿಂಹರಾಜುಎಲ್.ಸಾಯಿರಾಂ ಎಲೆರಾಂಪುರ. ಮದುಕುಮಾರ್. ರಮೇಶ್. ರಂಗನಾಥ್ ಹಾಗೂ ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















