ನಾಲ್ಕು ಹನಿಗಳು.
೧.
ಎಷ್ಟೇ ಹೊಲಸಾಗಿದೆ,
ಎಂದು ಗೊತ್ತಿದ್ದರೂ,
ಮತ್ತೆ ಅದರ ಸುವಾಸನೆಯ
ಕಡೆಗೆ, ಮುಖ ಮಾಡುವ
ಜನರಿಗೆ ಯಾವ ಹೆಸರಿನಿಂದ
ಕರೆಯೋಣ ನೀವೇ ಹೇಳಿ!.
೨.
ಮತದಾನ.
ಹಸಿದವನಿಗೆ
ಅನ್ನ ದಾನ ಶ್ರೇಷ್ಟವಾದರೆ,
ಚುನಾವಣೆಗೆ ನಿಂತವಗೆ
ಮತದಾನವೇ ಸರ್ವಶ್ರೇಷ್ಠ!
೩.
ಅನುಭವ.
ನನಗೆ ಏನೇನೂ ಅನುಭವ
ಇಲ್ಲವೇ ಇಲ್ಲ,ರಾಜಕೀಯ
ಮಾಡಲು ನನಗೆ ಬರುವುದಿಲ್ಲ!
೪.
ರಾಜಕೀಯದಲ್ಲಿ
ಇರುವುದೇ
ಹಣ ಗಳಿಸಲಿಕ್ಕಾಗಿ,
ಎಂದವರ ಮುಖವೀಗ
ಥೇಟ್ ಕಾಗಿ!..
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.




















