ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಜೃಂಭಣೆಯಿಂದ ಜರುಗಿದಶ್ರೀ ಕ್ಷೇತ್ರ ಉಜ್ಜಯಿನಿ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿಯಿನಿ ಗ್ರಾಮದ ಆರಾಧ್ಯ ದೈವ ಶ್ರೀ ಜಗದ್ಗುರು ಮರುಳಸಿದ್ದೇಶ್ವರ ಸ್ವಾಮಿಯ ರಥೋತ್ಸವ ವಾದ್ಯ ಗೋಷ್ಠಿಗಳ ಮೂಲಕ ಯಶಸ್ವಿಯಾಗಿ ಉಜ್ಜಿಯಿನಿ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಮಹಾ ಸ್ವಾಮಿಗಳು ಸದ್ಧರ್ಮ ಪೀಠ ಉಜ್ಜಯಿನಿ ಇವರ ಸಾನಿಧ್ಯದಲ್ಲಿ ನಡೆಯಿತು.
ವಿಶೇಷ ಎಂದರೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ವಾಮಿಯ ರಥೋತ್ಸವದ ಮುಂಚೆ ಮಳೆ ಬಂದು ವರುಣನ ಆ ಒಂದು ಮಳೆಹನಿಯು ಸ್ವಾಮಿಯ ಅಭಿಷೇಕ ಮಾಡಿದಂತೆ ಸ್ವಾಮಿಯ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಈ ಕಾರ್ಯಕ್ರಮಕ್ಕೆ ಆಗಮನಿಸಿದ ವೀರಶೈವ ಪಂಚಪೀಠಗಳಲ್ಲಿ ಒಂದಾದ ವಾರಣಾಸಿಯ (ಕಾಶಿ) ಜ್ಞಾನಸಿಂಹಾಸನದ ಪ್ರಸ್ತುತ ಜಗದ್ಗುರುಗಳು ಶ್ರೀಮದ್ ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ( ಶ್ರೀ ಮದ್ ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾದ್ಯ ಶಿವಾಚಾರ್ಯ ಭಗವತ್ಪಾದರು) ಹಾಗೂ ಶ್ರೀ ವರಸಾಧ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳು ತೆಗ್ಗಿನಮಠ ಸಂಸ್ಥಾನ ಹರಪನಹಳ್ಳಿ ಹಾಗೂ ಕೂಡ್ಲಿಗಿ ಕ್ಷೇತ್ರದ ಶಾಸಕರು ಎನ್. ಟಿ. ಶ್ರೀನಿವಾಸ ಸೇರಿದಂತೆ ಸಮಸ್ತ ನಾಡಿನ ಸ್ವಾಮಿಯ ಭಕ್ತ ಜನಸ್ತೋಮ ಉಜ್ಜಿಯಿನಿ ಕ್ಷೇತ್ರದ ಎಲ್ಲಾ ಭಕ್ತರು ಸ್ವಾಮಿಯ ರಥೋತ್ಸವಕ್ಕೆ ಪಾತ್ರರಾಗಿ ಯಶಸ್ವಿಯಾಗಿ ರಥೋತ್ಸವ ನೆರವೇರಿಸಿದರು.

ವರದಿಗಾರರು – ಎನ್. ಚಂದ್ರಗೌಡ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!