ಸಿರುಗುಪ್ಪ- ಕರ್ನಾಟಕ ಸರ್ಕಾರ 2025-26ನೇ ಸಾಲಿನ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮುಖ್ಯಮಂತ್ರಿ ಅವರ ಮೂಲ ಸೌಕರ್ಯ ಅಭಿವೃದ್ಧಿ ಸಿ ಎಂ ಐ ಡಿ ಪಿ ಯೋಜನೆಯ ಅನುದಾನದ ಅಡಿಯಲ್ಲಿ ನಡವಿ ಗ್ರಾಮದ ಶ್ರೀರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ 15 ಲಕ್ಷ ರೂ, ವೆಚ್ಚದ ಸಮುದಾಯ ಭವನದ ಶಂಕು ಸ್ಥಾಪನೆಯನ್ನು ವಿಧಾನಸಭಾ ಕ್ಷೇತ್ರದ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ಈ ವೇಳೆಯಲ್ಲಿ ಕಾಂಗ್ರೆಸ್ ಮುಖಂಡರಾದ ಉಡೇಗೋಳು ನರಸಿಂಹ ನಾಯಕ, ಬಸರಹಳ್ಳಿ ಸುರೇಶ ರೆಡ್ಡಿ, ಕಾರ್ಮಿಂಚಿನ ಗೌಡ, ಪಕೀರಪ್ಪ, ಗುರುರಾಜ ನಾಯಕ, ಬಿ.ವೆಂಕಟೇಶ್, ಹೆಚ್. ಗಣೇಶ್, ಪವನ್ ದೇಸಾಯಿ, ಜಿಲ್ಲಾ ಪಂಚಾಯತ್ ರಾಜ್ ಇಂಜಿನಿಯರ್ ಕಾಂತರಾಜು ನಡವಿ ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು ನಡವಿ ಗ್ರಾಮದ ಗಣ್ಯರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ



















