ಸೌತೆ ಸಿಪ್ಪೆಯು ಕ್ರಿಯಾಶೀಲತೆಯಲ್ಲಿ
ಸೇರಿಸಲು ಬಾದಾಮಿಗಳ ಜೊತೆಯಲ್ಲಿ
ಮೂಡಿತು ರಂಗೋಲಿಯ ಒರತೆ ಇಲ್ಲಿ
ಕವಿಮನದಿ ಪುಟ್ಟ ಕವಿತೆಯಾಗಿರುವುದಿಲ್ಲಿ
ಬಿಸುಟುವ ಪಕಳೆಯ ಮೂಸೆಯು ನಡುವಲ್ಲಿ
ಆವರಿಸಿವೆ ಕಾಗದದ ಬೊಟ್ಟುಗಳು ವೃತ್ತದಲ್ಲಿ
ಸುಲಲಿತ ಚಿತ್ತಾರವಾಗಿದೆ ಅರುಣರಾಗದಲ್ಲಿ
ಆಸ್ವಾದನೆಗೆ ಬರುತಿದೆ ತಮ್ಮಲ್ಲಿಗೆ ಇಂದಿಲ್ಲಿ
- ಲಲಿತಾ ಕೆ ಆಚಾರ್, ಬೆಂಗಳೂರು



















