ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಆಸ್ತಿ 10

ಆಸ್ತಿ 10

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು : ಮಕ್ಕಳೊಡನೆ ಆಟವಾಡುವುದು

(1955 – 1960) ನಮ್ಮ ತಂದೆಯವರ ಇನ್ನೊಂದು ಹವ್ಯಾಸವೆಂದರೆ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದು. ಅವರು ದಿನವೂ ಮಕ್ಕಳಿಗೆ ಸ್ನಾನ ಮಾಡಿಸುತ್ತಿದ್ದರು ಹಾಗೂ ಮಕ್ಕಳು ಸರಿಯಾಗಿ ಹಲ್ಲುಜ್ಜುವುದನ್ನು ಖಾತ್ರಿಪಡಿಸಿಕೊಳ್ಳುವುದು ಆಗಿತ್ತು. ಅವರು ತಮ್ಮ ವಿರಾಮದ ಸಮಯದಲ್ಲಿ ಮಕ್ಕಳೊಡನೆ ಆಟವಾಡುತ್ತಿದ್ದರು ಮತ್ತು ಅವರು ಮಕ್ಕಳಿಗೆ ಎಲ್ಲ ವಿಷಯದಲ್ಲೂ ಮಾರ್ಗದರ್ಶನ ಕೊಡುತ್ತಿದ್ದರು. ಅವರು ಮಕ್ಕಳನ್ನು ಮಾರ್ಕೆಟಿಗೆ, ಊರ ಹೊರಗಿನ ಮೈದಾನಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಅವರು ಮಕ್ಕಳಿಗೆ ಸಂಖ್ಯೆಗಳ ಸಣ್ಣ ಸಣ್ಣ ಸಮಸ್ಯೆಗಳನ್ನು , ಮಕ್ಕಳು ಖುಷಿಪಡುತ್ತಾ ಸುಲಭವಾಗಿ ತಿಳಿದುಕೊಳ್ಳುವಂತೆ ಹೇಳಿ ಕೊಡುತ್ತಿದ್ದರು. ಮುಧೋಳದಲ್ಲಿ ಅವರು ಮಕ್ಕಳೊಡನೆ ಅತ್ಯಂತ ಹೆಚ್ಚಿನ ಖುಷಿ ಅನುಭವಿಸಿದರು. ಅವರು ಮಕ್ಕಳೊಡನೆ ಮಕ್ಕಳಾಗಿ ಬಿಡುತ್ತಿದ್ದರು. ಅವರಿಗೆ ಮುಧೋಳದಲ್ಲಿ ಇರುವಾಗಲೇ ( ಬಾಗಲಕೋಟೆ ಜಿಲ್ಲೆ) 4 ಮಕ್ಕಳು ಆಗಿದ್ದವು.

ಮಕ್ಕಳ ವಿಕಾಸಕ್ಕೆ ಮಕ್ಕಳೊಡನೆ ನಿಮ್ಮ ವಿರಾಮದ ಸಮಯವನ್ನು ಕಳೆಯಿರಿ ಎಂಬುದು ಮನೋವಿಜ್ಞಾನಿಗಳ ಮತ ಕೂಡ ಈಗ ಆಗಿದೆ.

ನಮ್ಮ ತಂದೆಯವರ ಈ ಅಮೂಲ್ಯವಾದ ಆಸ್ತಿಯು ಮಕ್ಕಳಿಗೆ ಬಳುವಳಿಯಾಗಿ ಬಂದಿದೆ. ನಾವು ಕೂಡ ಮಕ್ಕಳೊಡನೆ ಆಡುವದು, ಸಮಯ ಕಳೆಯುವುದು, ಹಾಗೂ ಅವರಿಗೆ ಸೂಕ್ತ ಪಾಠಗಳನ್ನು ಹೇಳಿಕೊಡುವುದನ್ನು ಮಾಡುತ್ತೇವೆ.

  • ಪ್ರಮೋದ್ ಕುಲಕರ್ಣಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!