ಬಾಗಲಕೋಟೆ -ಮುಧೋಳ :ಭೌತಿಕ ಸಂಪತ್ತುಗಳೆಲ್ಲವೂ ಭಗವಂತ ಕೊಟ್ಟ ಭಿಕ್ಷೆ. ಭಗವಂತನ ಉಪಕಾರ ಸ್ಮರಣೆ ನಮಗಿರಬೇಕು. ನಶ್ವರವಾಗಿರುವ ಈ ಜಗತ್ತಿನಲ್ಲಿ ಭಗವಂತ ಒಬ್ಬನೇ ಶಾಶ್ವತ. ಬಿಟ್ಟು ಹೋಗುವ ಈ ಪ್ರಪಂಚದಲ್ಲಿ ಕೊಟ್ಟು ಹೋಗುವ ಚಿಂತನೆ ಮಾಡಬೇಕೆಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು. ಅವರು ತಾಲೂಕಿನ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ನಡೆದ “ಪುರುಷೋತ್ತಮ” ಅಧಿಕಮಾಸದ ಆರಂಭ ಹಾಗೂ 100 ನೇ ತತ್ವ ದಶ೯ನ. ಶಿವಾನುಭವ. ಮನೆಯಂಗಳದಲ್ಲಿ ಶರಣರ ಮನದ ಮಾತು. ಮಾಸಿಕ ಕಾರ್ಯಕ್ರಮದ ಸನ್ನಿಧಾನವನ್ನು ವಹಿಸಿ ಮಾತನಾಡುತ್ತಾ ಆಧ್ಯಾತ್ಮಿಕ ಜ್ಞಾನವು ಪ್ರತಿಯೊಬ್ಬರ ಹೃದಯ ಮತ್ತು ಮನಸ್ಸುಗಳಿಗೆ ತಲುಪಬೇಕಿದೆ ಎಂದ ಅವರು ನಮಗೆ ಅಪಾರ ಪ್ರಯೋಜನಗಳನ್ನು ನೀಡಿದ ನಮ್ಮ ಸಂಸ್ಕೃತಿ .ಭಕ್ತಿ. ಭಾವನೆಗಳನ್ನು. ಮರಳಿ ತರುವುದರೊಂದಿಗೆ ಬಾಗಿ ವಿನಮ್ರತೆಯಿಂದ ಬದುಕುವ ನೀತಿಯನ್ನು ಕಲಿಯಬೇಕು ಮತ್ತು ಕಲಿಸಬೇಕೆಂದರು.
ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಉಪಾಧ್ಯಕ್ಷ ಮುತ್ತಣ್ಣ ಬನಾಜಗೋಳ. ಹಿರಿಯ ಜನಪದ ಕಲಾವಿದೆ ಶ್ರೀಮತಿ ಮುತ್ತವ್ವ ಲಕ್ಷ್ಮೇಶ್ವರ. ಲೋಕ ನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ. ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಗೌಡ ಪಾಟೀಲ. ಕಲಾವಿದರಾದ ಚುಳಕಪ್ಪ ಮಳಲಿ. ಕುಶಾಲ ರಾಣವುಗೋಳ ಉಪಸ್ಥಿತರಿದ್ದರು.
ಮಹಾಳಿಂಗೇಶ್ವರ ದೇವಸ್ಥಾನದ ಪೂಜ್ಯರಾದ ಗುರು ಪ್ರಸಾದ್ ಸ್ವಾಮೀಜಿ ಅವರ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು. ಅಧಿಕಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಿರಂತರ ಬೆಳಿಗ್ಗೆ ಹಾಗೂ ಸಾಯಂಕಾಲ ಪ್ರವಚನ .ಪಾರಾಯಣ. ನಾಮಸ್ಮರಣೆ ಕಾರ್ಯಕ್ರಮ ಜರಗುವುದು.ಅಧಿಕ ಮಾಸದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಗೌಡ ಪಾಟೀಲ್ ಹೇಳಿದರು. ಎಲ್ ಶ್ರೀನಿವಾಸ ಪ್ರಸಾದ ಸ್ವಾಗತಿಸಿದರು. ಎಲ್ ಲಕ್ಷ್ಮೀಪ್ರಸಾದ್ ವಂದಿಸಿದರು.
- ಕರುನಾಡ ಕಂದ ಸುದ್ದಿ




















