ಬೈಲಹೊಂಗಲ ನಗರದ ಸಾರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಘನತ್ಯಾಜ್ಯ ನಿರ್ವಹಣಾ ನಿಯಮಗಳು 2026 ಅನ್ನು 01 ಏಪ್ರೀಲ್ 2026 ರಿಂದ ಜಾರಿಗೆ ಬರುವಂತೆ ಜಾರಿಗೆ ತಂದಿರುತ್ತದೆ. ಇದರ ಅನ್ವಯ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಯ ಕಸವನ್ನು ಮೂಲದಲ್ಲಿಯೇ ನಾಲ್ಕು ಭಾಗಗಳಾಗಿ, ಅಂದರೆ ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ ಮತ್ತು ವಿಶೇಷ ಕಾಳಜಿ ಕಸ ಎಂದು ಪ್ರತ್ಯೇಕಿಸಿ ನಗರಸಭೆಯ ಕಸದ ಗಾಡಿಗೆ ನೀಡಬೇಕಾಗಿರುತ್ತದೆ.
ಹಸಿ ಕಸ, ಅಂದರೆ ಆಹಾರ ಪದಾರ್ಥಗಳು, ತರಕಾರಿ, ಹಣ್ಣು, ಹೂವು, ಬಿದ್ದಿರುವ ಗಿಡದ ಎಲೆಗಳು ಮತ್ತು ಕೊಳೆಯಬಲ್ಲ ಇತರೆ ವಸ್ತುಗಳು,
ಒಣ ಕಸ ಅಂದರೆ ಪೇಪರ್, ಪ್ಲಾಸ್ಟಿಕ್, ಕಟ್ಟಿಗೆ, ಲೋಹದ ಚೂರುಗಳು, ಬಟ್ಟೆ, ಗಾಜು, ರಬ್ಬರ್ ಟೆಟ್ರಾ ಫ್ಯಾಕ್ ಇತ್ಯಾದಿ.
ಸ್ಯಾನಿಟರಿ ತ್ಯಾಜ್ಯ : ಬಳಸಿದ ಡೈಪರ್ಗಳು, ಸ್ಯಾನಿಟರಿ ಟವೆಲ್ಗಳು ಅಥವಾ ನ್ಯಾಪ್ಕಿನ್ಗಳು ಮತ್ತು ಇತ್ಯಾದಿ.
ವಿಶೇಷ ಕಾಳಜಿ ತ್ಯಾಜ್ಯ : ಅಂದರೆ ಮನೆಯಲ್ಲಿ ತ್ಯಜಿಸಿದ ಬಣ್ಣದ ಡ್ರಮ್ಗಳು, ಕೀಟನಾಶಕ ಡಬ್ಬಿಗಳು ಅಥವಾ ಬಾಟಲಿಗಳು, ಬಲ್ಬಗಳು, ಟ್ಯೂಬ್ ಲೈಟ್ಗಳು, ಅವಧಿ ಮೀರಿದ ಔಷಧಿಗಳು, ಮುರಿದ ಪಾದರಸದ ಥರ್ಮಾಮೀಟರ್ಗಳು, ತ್ಯಾಜ್ಯ ಬ್ಯಾಟರಿಗಳು, ಬಳಸಿದ ಸೂಜಿಗಳು ಹಾಗೂ ಇತ್ಯಾದಿ
ಈ ಪ್ರಕಾರ ತ್ಯಾಜ್ಯವನ್ನು ಪ್ರತ್ಯೇಕಿ ನಗರಸಭೆ ವಾಹನಗಳಿಗೆ ನೀಡತಕ್ಕದ್ದು, ರಸ್ತೆ, ಚರಂಡಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು, ಸುಡುವುದು ಅಥವಾ ಹೂಳುವುದು ಸಂಪೂರ್ಣ ನಿಷೇಧಿಸಲಾಗಿರುತ್ತದೆ ಅಂತಾ ಈ ಮೂಲಕ ತಿಳಿಸಿದೆ.
ಬನ್ನಿ, ನಮ್ಮ ಬೈಲಹೊಂಗಲ ನಗರವನ್ನು ಸುಂದರ, ಸ್ವಚ್ಛ ಮತ್ತು ಮಾದರಿ ನಗರವನ್ನಾಗಿ ಮಾಡಲು ನಗರಸಭೆಯೊಂದಿಗೆ ಕೈಜೋಡಿಸಿ.




















