
ದಾಂಡೇಲಿ :ಮಾಸ್ಕೇರಿ ಸಾಹಿತ್ಯಾರಾಧನ ಸಂಸ್ಥೆ ಮತ್ತು ಭಾರತಿ ಪ್ರಕಾಶನ ದಾಂಡೇಲಿ ಇವರ ಸಹಯೋಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಗೀತಾಂಜಲಿ ಕವಿ ಬಂಗಾಳದ ರವೀಂದ್ರನಾಥ ಠಾಗೂರ್ ಅವರ ಜನುಮ ದಿನದ ಪ್ರಯುಕ್ತ ಆಚರಿಸಬೇಕಾದ ಕಾರ್ಯಕ್ರಮವನ್ನು ಮೇ 28 ಕ್ಕೆ ಸಂಜೆ 5.00 ಗಂಟೆಗೆ ಮಾಸ್ಕೇರಿ ಸಾಹಿತ್ಯ ಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಾಸ್ಕೇರಿ ಸಾಹಿತ್ಯರಾಧನ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಂದು ಮಾಸ್ಕೇರಿ ನಾಯಕರ ಕಿರುಕವನ “ಚಂದ್ರಚೆಂದುಳ್ಳಿ” ಕುರಿತು ಉತ್ತಮವಾಗಿ ವಿಶ್ಲೇಷಿದ ಕಾವ್ಯ ಪ್ರೇಮಿಗಳಾದ, ಪಾಲ್ಗುಣ ಗೌಡ ಅಂಕೋಲಾ, ಕೆ.ಟಿ. ಶ್ರೀಮತಿ ಮೈಸೂರು, ನಾಗರತ್ನ ಲೋಕೇಶ್ ಶಿರಸಿ, ಪ್ರವೀಣ ಸುಲಾಖೆ ದಾಂಡೇಲಿ, ಜಿ ವಿ. ಕೊಪ್ಪಲ ತೋಟ, ಕಲ್ಪನಾ ಹೆಗಡೆ ಶಿರಸಿ, ರೇಣುಕಾ ಭಟ್ ಬ್ಯಾಗದ್ದೆ, ನರೇಶ ನಾಯ್ಕ್, ರವೀಂದ್ರನಾಥ ಲಕ್ಷ್ಮೇಶ್ವರ ಅವರುಗಳಿಗೆ ಫಲಕ ನೀಡಿ ಗೌರವಿಸಲಾಗುತ್ತದೆ.
ಹಿರಿಯ ಕವಿ, ರವೀಂದ್ರ ಲಕ್ಷ್ಮೇಶ್ವರ ದೀಪ ಬೆಳಗಿಸಲಿದ್ದು , ಮುಖ್ಯ ಅತಿಥಿಗಳಾಗಿ ರೋಶನ್ ನೇತ್ರಾವಳಿ ಪಾಲ್ಗೊಳ್ಳಲಿದ್ದಾರೆ.
ಗೌರವ ಅತಿಥಿಗಳಾಗಿ ಬುಧವಂತ ಗೌಡ ಪಾಟೀಲ್, ದಶರಥ್ ಬಡ್ಡಿವಡ್ಡರ, ತೇಜಸ್ ಎನ್. ರಾವ್, ಶ್ರೀನಾಥ ಪಾಸಲ್ಕರ್, ಜನ್ನು ಕಾಟೆಕರ್, ರವಿ ಚವ್ಹಾಣ, ರಮೇಶ್ ಚಂದಾವರ, ನಿರೂಪಮಾ ನಾಯಕ, ಪಿ.ಎಂ. ನಾಯಕ, ಕ್ರಷ್ಣ ಲಕ್ಷ್ಮೇಶ್ವರ, ಶ್ರೀ ಪುರಾಣಿಕ ಭಾಗವಹಿಸಲಿದ್ದಾರೆ.
ವಿಶ್ವನಾಥ್ ಭಾಗ್ವತ್ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಕಾವ್ಯ ಪ್ರೇಮಿಗಳಾದ ಭಾರತಿ ಕವರಿ, ಪುರಾಣಿಕ, ಶಾರದಾ ಮಾಳಿ, ಕವಡಿಮಟ್ಟಿ, ಕಾವ್ಯ ಭಟ್. ಲಕ್ಷ್ಮಿ ಶಿಂಗಾಡಿ, ಡಿ.ಜಿ. ದೇಸಾಯಿ ಅವರುಗಳು ಪಾಲ್ಗೊಳ್ಳಲಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ನಾಯಕರ ಮುಖ್ಯಸ್ಥಿಕೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ವರದಿ ತೇಜಸ್ ರಾವ್, ದಾಂಡೇಲಿ




















