ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಕ್ರಮ ಮದ್ಯ ಮಾರಾಟ ತಡೆಯಲು ಪಿಐ ಪ್ರಕಾಶ ಆ‌ರ್. ಯಾತನೂರು ಅವರಿಗೆ ಕರವೇ ನಾರಾಯಣಗೌಡ ಬಣ ಸಂಘಟನೆ ಒತ್ತಾಯ.

ಗಂಗಾವತಿ: ತಾಲೂಕಿನಾಧ್ಯಂತ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದ್ದು ಕೂಡಲೇ ಅಬಕಾರಿ ಇಲಾಖೆ ಅಕ್ರಮ ಮದ್ಯ ಮಾರಾಟವನ್ನು ತಡೆಹಿಡಿದು, ಅಕ್ರಮ ಮದ್ಯ ಮಾರಾಟಗಾರರ ಮೇಲೆ ಶಿಸ್ತು ಕ್ರಮ ಜರುಗಿಸಲು ಕರವೇ (ನಾರಾಯಣಗೌಡ ಬಣ) ಒತ್ತಾಯಿಸಿದೆ ಎಂದು ತಾಲೂಕ ಅಧ್ಯಕ್ಷರಾದ ಮಲ್ಲಿಕಾರ್ಜುನ ಗಿಣಿಮೋತಿ ತಿಳಿಸಿದರು.

ಅವರು ಗಂಗಾವತಿ ನಗರದಲ್ಲಿ ಅಕ್ರಮ ಮದ್ಯ ವ್ಯಾಪಾರವನ್ನು ತಡೆ ಹಿಡಿಯಲು ಒತ್ತಾಯಿಸಿ, ನಗರ ಪೊಲೀಸ್ ಠಾಣೆಗೆ ಪಿಐ ಪ್ರಕಾಶ ಆರ್. ಯಾತನೂರು ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು. ನಮ್ಮ ಸಂಘಟನೆಯಿಂದ ಈಗಾಗಲೇ ಮೇ-16 ರಂದು ಅಬಕಾರಿ ಉಪ ಆಯುಕ್ತರು ಹಾಗೂ ಮೇ-18 ರಂದು ಕೊಪ್ಪಳ ವಲಯ ಅಬಕಾರಿ ನಿರೀಕ್ಷರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಸಿಎಲ್-2 ಸನ್ನದುದಾರರ ಎಲ್ಲಾ ಅಂಗಡಿಗಳಲ್ಲಿ ಕೌಂಟರ್ ನಿಂದ ಗ್ರಾಹಕರ ಟೇಬಲ್ ಗಳಿಗೆ ರಾಜಾರೋಷವಾಗಿ ಮದ್ಯ ಸರಬರಾಜು ಮಾಡುತ್ತಿದ್ದು ಇದು ಕರ್ನಾಟಕ ಅಬಕಾರಿ ನಿಯಮಗಳು 1965ರ ನಿಯಮ 5(2)ರ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದಂತಾಗಿದೆ. ಈ ಅಂಗಡಿಗಳು ಚಿಲ್ಲರೆ ಮಾರಾಟದ ಪರವಾನಿಗೆಯನ್ನು ದುರುಪಯೋಗಪಡಿಸಿಕೊಂಡು, ಅಬಕಾರಿ ಶುಲ್ಕವನ್ನು ಪಾವತಿಸದೇ ಕಾನೂನುಬದ್ಧ ಮಾನದಂಡಗಳನ್ನು ಅನುಸರಿಸದೇ ಯಾವುದೇ ಮದ್ಯದ ರೇಟ್ ಬೋರ್ಡ್ ಹಾಕದೇ ಸಿಎಲ್-9 ಬಾರ್ ಮತ್ತು ರೆಸ್ಟೋರೆಂಟ್ ಗಳಂತೆ ಅನಧಿಕೃತವಾಗಿ ವರ್ತಿಸುತ್ತಿವೆ. ಇದರಿಂದ ಜನವಸತಿ ಪ್ರದೇಶಗಳಲ್ಲಿನ ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ವಯೋಸಹಜ ಕಾಯಿಲೆ ಹೊಂದಿರುವವರಿಗೆ ಕಿರಿಕಿರಿ ಉಂಟುಮಾಡಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ ಎಂದು ಈಗಾಗಲೇ ಮೇ-18 ರಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕೊಪ್ಪಳ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ಗಿರೀಶಾನಂದ ಜ್ಞಾನಸುಂದರ ನೇತೃತ್ವದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಮನವಿ ಸಲ್ಲಿಸಲಾಗಿದೆ. ಆದರೂ ಕೂಡಾ ಜಿಲ್ಲಾ ಮತ್ತು ತಾಲೂಕ ಕೇಂದ್ರ ಸ್ಥಾನದಿಂದ ಗ್ರಾಮೀಣ ಪ್ರದೇಶದಲ್ಲಿರುವ ಡಾಬಾಗಳು. ಪಾನ್ ಬೀಡಾ ಅಂಗಡಿಗಳು. ಸಣ್ಣ ಸಣ್ಣ ಕಿರಾಣಿ ಅಂಗಡಿಗಳಲ್ಲಿ ಕದ್ದು ಮುಚ್ಚಿ ಅಕ್ರಮ ಮದ್ಯ/ಬಿಯರ್/ವೈನ್ ವ್ಯಾಪಾರ ಮಾಡುತ್ತಿದ್ದು ಅಬಕಾರಿ ಸತ್ಯಾಪನಾ ಪತ್ರ (ಇವಿಸಿ) ಪಡೆಯದೇ ಕರ್ನಾಟಕ ಅಬಕಾರಿ (ಮದ್ಯಪಾನೀಯಗಳ ಸ್ವಾಧೀನತೆ, ಸಾಗಾಣಿಕೆ. ಆಮದು ಮತ್ತು ರಫ್ತು) ನಿಯಮಗಳು, 1965ರ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಅನ್ವಯಿಸುವ ಅಬಕಾರಿ ರಫ್ತು ಸುಂಕವನ್ನು ಭರಿಸದೇ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿರುವುದನ್ನು ನಮ್ಮ ಕರವೇ ಬಲವಾಗಿ ಖಂಡಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಕರವೇ (ನಾರಾಯಣಗೌಡ ಬಣ) ಸಂಘಟನೆಯ ತಾಲೂಕ ಉಪಾಧ್ಯಕ್ಷ ನಿಸಾರ್, ತಾಲೂಕ ಕಾರ್ಯದರ್ಶಿ ಅಂಜನಿ ಗೊರೂರು, ಪ್ರವೀಣಕುಮಾರ, ಸಾಜಾ ತಾಲೂಕ ಸಂಚಾಲಕ ಶಬ್ಬಿರ್ ಪಾಶಾ, ನಗರ ಘಟಕದ ಪದಾಧಿಕಾರಿಗಳಾದ ಹೇಮಂತಕುಮಾರ ಹೊಸ್ತೇರಾ, ಅಜಯಕುಮಾರ, ಬಸಣ್ಣ ಕಲ್ಲುಡಿ ಇತರರು ಇದ್ದರು.

ವರದಿ ಯಮನೂರ ಎಂ. ಸಿಂಗನಾಳ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!