ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಣ್ಮರೆಯಾದವನು 20 ವರ್ಷಗಳ ನಂತರ ಖಾವಿಧಾರಿಯಾಗಿ ದರ್ಶನ

ಬಳ್ಳಾರಿ / ಕುರುಗೋಡು : ಯುವಕನಾಗಿದ್ದಾಗ ಕಣ್ಮರೆಯಾಗಿದ್ದ ಶಂಕರ ಆಚಾರಿ 20 ವರ್ಷಗಳ ನಂತರ ಖಾವಿಧರಿಸಿ ರಾಜನ್ ಪುರಿ ಮಹಾರಾಜನಾಗಿ ಮನೆಗೆ ಭೇಟಿ ನೀಡಿ ಹೆತ್ತವರಲ್ಲಿ ಅಚ್ಚರಿ ಮೂಡಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ಜರುಗಿತು.

ಕುರುಗೋಡಿನ ಚಂದ್ರಶೇಖರಾಚಾರಿ ಮತ್ತು ಚಂದ್ರಕಲಾ ದಂಪತಿಗಳ ಏಕೈಕ ಪುತ್ರ ಶಂಕರ ಆಚಾರಿ ಅವರು 20 ವರ್ಷಗಳ ನಂತರ ಮನೆಗೆ ಮರಳಿದ್ದಾರೆ. ಮಗನನ್ನು ಕಂಡ ತಂದೆ ತಾಯಿಯ ಕಣ್ಣಾಲಿಗಳು ಒದ್ದೆಯಾದವು.

ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ದುಡಿಯಲು ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ಮುಂಬೈಗೆ ತೆರಳಿ ಕುಟುಂಬದ ಸಂಪರ್ಕವಿಲ್ಲದೆ ನೆಲೆಸಿದ್ದರು. ನಂತರ ಹರಿದ್ವಾರದಲ್ಲಿ 7 ವರ್ಷ ನೆಲೆಸಿ ನಿರಂಜನ್ ದೇವ್ ಎಂಬ ಗುರುಗಳಿಂದ ಧೀಕ್ಷೆ ಪಡೆದಿದ್ದಾರೆ.

‘ಫೇಸ್ಬುಕ್ನಲ್ಲಿ ಪರಿಚಯವಾದ ಕುರುಗೋಡಿನ ನಿವಾಸಿ ಬಸವರಾಜ ಕುಂಬಾರು ಅವರ ಸಹಾಯದಿಂದ ಕುಟುಂಬಸ್ಥರ ಭೇಟಿ ಮಾಡಿದ್ದೇನೆ. ಹಿಂದೂ ಸನಾತನ ಧರ್ಮದಲ್ಲಿ ಕುಲದೇವರ ದರ್ಶನ ಪಡೆಯಲು ಅವಕಾಶ ವಿದೆ. ಇಲ್ಲಿರುವ ಕಾಳಿಕಾದೇವಿಯ ದರ್ಶನ ಪಡೆದಿದ್ದೇನೆ’ ಎಂದು ಶಂಕರ ಆಚಾರಿ ತಿಳಿಸಿದರು.

ಕಳೆದುಹೋದ ಮಗ ಸನ್ಯಾಸಿ ರೂಪದಲ್ಲಿ ಕಣ್ಣಮುಂದೆ ಬಂದು ನಿಂತದ್ದನ್ನು ಕಂಡು ಹೆತ್ತವರು ಹಾಗೂ ಗ್ರಾಮಸ್ಥರು ಆಶ್ಚರ್ಯ ಮತ್ತು ಭಾವುಕರಾಗಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!