
ಬಳ್ಳಾರಿ / ಕಂಪ್ಲಿ : ತ್ಯಾಗ, ಬಲಿದಾನಗಳ ಸಂಕೇತವಾದ ಬಕ್ರೀದ್ ಹಬ್ಬವನ್ನು ಪಟ್ಟಣದ ಪ್ರಥಮ ದರ್ಜೆ ಕಾಲೇಜು ಬಳಿಯ ಇರುವ ಹೊಸ ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಝ್, ಧಾರ್ಮಿಕ ಪ್ರವಚನಗಳು ನಡೆದವು. ಮುಸ್ಲಿಂ ಭಾಂದವರು ಶ್ರದ್ದೆ ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿದರು.
ಮುಂಜಾನೆಯೇ ಪಟ್ಟಣದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಲ್ಲಾ ಮೊಹಲ್ಲಾ ಜಾಮಿಯಾ ಮಸೀದಿಯ ಇಮಾಮ್ ಸಾಬ್ ಹಾಜಿ ಮಹಮ್ಮದ ಜೀಯಾವುದ್ದೀನ್ ರಜ್ಜಿ ಪ್ರವಚನ ನೀಡಿ ಮಾತನಾಡಿ ಹಬ್ಬದ ಸಂದೇಶ ಸಾರಿ, ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ-ಧರ್ಮದ ಮಹತ್ವ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಸಮಾನತೆಯಿಂದ ಬಾಳುವಂತೆ ಕರೆ ನೀಡಿದರು.
ನಂತರ ಮುದ್ದಪುರ ಅಗಸಿಯ ಇಮಾಮ್ ಹಾಫೀಜ್ ಮಹಮ್ಮದ್ ಸಿರಾಜುದ್ದೀನ ಖಲಂದರಿ ಸಾಮೂಹಿಕ ನಮಾಜ್ ಮತ್ತು ಕುತ್ಬಾ ಪಾರಾಯಣ ನಡೆಸಿಕೊಟ್ಟರು.
ಪ್ರಾರ್ಥನೆಯ ಬಳಿಕ ಮುಸ್ಲಿಂ ಭಾಂದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಸಂದರ್ಭದಲ್ಲಿ ಪಟ್ಟಣದ ವಿವಿಧ ಮಸೀದಿಗಳ ಪೇಶ ಇಮ್ಮಮ್ ಗುರುಗಳು ಮುಸ್ಲಿಂ ಸಮಾಜದ ಹಿರಿಯರು, ಮಕ್ಕಳು ಹಾಗೂ ಮುಖಂಡರು ಭಾಗಿಯಾಗಿದ್ದರು.
ಬಕ್ರೀದ್ ಹಿನ್ನೆಲೆಯಲ್ಲಿ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಿಗಿ ಬಂದೋ ಬಸ್ತ್ ಒದಗಿಸಲಾಗಿತ್ತು.
ವರದಿ : ಜಿಲಾನಸಾಬ್ ಬಡಿಗೇರ್




















