ಅಡುಗೆಮನೆಯ ನೇತಾರ ಈರುಳ್ಳಿಯ ಕತ್ತರಿಸುವಾಗ
ಗರಿಗೆದರಿ ಹರಡಿದ್ದ ಒಂದು ತುಂಡನು ಕಂಡೆನಾಗ
ಸುರುಳಿ ಸುತ್ತಿದ ಜೋಳದ ಎಳೆಗಳು ನೆನಪಾಯಿತಾಗ
ಸೃಜನಶೀಲತೆಯಲಿ ಕಾಳಿನ ಹಲ್ಲುಗಳ ಜೋಡಿಸಿದಾಗ
ಗುಲಾಬಿ ಹೂ ಮತ್ತು ಎಸಳುಗಳಲಿ ಸಿಂಗರಿಸಲಾಗಿ
ಸುಲಲಿತ ಚಿತ್ತಾರದಿ ಮೂಡಿತೆನ್ನ ಭಾವ ಕಾವ್ಯವಾಗಿ
ಜಂಗಮವಾಣಿಯಲಿ ಸೆರೆಹಿಡಿದೆ ಕಲಾಭಿಮಾನಿಗಳಿಗಾಗಿ
ನಲ್ಮುಂಜಾವಲಿ ರವಾನಿಸುತಿರುವೆ ಸಂತಸದಿ ಆಸ್ವಾದನೆಗಾಗಿ
- ಲಲಿತಾ ಕೆ ಅಚಾರ್, ಬೆಂಗಳೂರು




















