ಇವಳ ಸಾಧನೆಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕಾಗಿದೆ : ಅಲ್ಕಾ ಪಡತಾರೆ
ವಿಜಯಪುರ: ಇತ್ತೀಚೆಗೆ ಕದಂಬ ಫೌಂಡೇಶನ್ ಗೋವಾ ವತಿಯಿಂದ ಬುದ್ಧ ಬಸವ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ಸುವರ್ಣ ಪೋಕಸ್ ವಾರ್ಷಿಕೋತ್ಸವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಮಟ್ಟದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಗೋವಾ ಪಣಜಿ ಅಶೋಕ್ ಥಿಯೇಟರ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ಶಹೀರಾ ಲಾಲಸಾಬ ಸವಾರಗೋಳ ಅವರು ಕ್ರೀಡಾ ಕ್ಷೇತ್ರದಲ್ಲಿ ಸೈಕ್ಲಿಂಗ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 6 ಚಿನ್ನದ ಪದಕ 6 ಬೆಳ್ಳಿ ಮತ್ತು 7 ಕಂಚಿನ ಪದಕ ಪಡೆದುಕೊಂಡಿದಕ್ಕೆ ಈ ಉತ್ತಮ ಸಾಧನೆಯನ್ನು ಗುರುತಿಸಿ ಪ್ರತಿಷ್ಠಿತ “ಗೋಲ್ಡನ್ ಐಕಾನ್ ನ್ಯಾಷನಲ್ ಅವಾರ್ಡ್” ನೀಡಿ ಗೌರವಿಸಲಾಗಿತ್ತು.
ಇದರ ಪ್ರಯುಕ್ತವಾಗಿ ಶಹೀರಾ ಸವಾರಗೋಳ ಅವರು ಕಲಿತ ವಿಜಯಪುರದ ಕ್ರೀಡಾ ವಸತಿ ನಿಲಯದಲ್ಲಿ ಕ್ರೀಡಾ ತರಬೇತಿದಾರರಾದ ಶ್ರೀಮತಿ ಅಲ್ಕಾ ಪಡತ್ತಾರೆ ಅವರ ನೇತೃತ್ವದಲ್ಲಿ ಅವರಿಗೆ ಅದ್ದೂರಿಯಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಲ್ಕಾ ಪಡತಾರೆ ಮಾತನಾಡಿ ಶಹೀರಾ ಸವಾರಗೋಳ ಒಬ್ಬಳು ವಿಜಯಪುರ ಜಿಲ್ಲೆಯ ಅದ್ಭುತ ಸೈಕ್ಲಿಂಗ್ ಕ್ರೀಡಾಪಟು ಆಗಿದ್ದಾಳೆ, ಅವಳ ಕಠಿಣ ಪರಿಶ್ರಮ, ಛಲ ಮತ್ತು ನಿರಂತರ ಪ್ರಯತ್ನಕ್ಕೆ ಇಂತಹ ಪ್ರಶಸ್ತಿಗಳು ಅತ್ಯಂತ ಪ್ರೇರಣಾದಾಯಕವಾಗಿದೆ, ಇವಳ ಈ ಯಶಸ್ವಿ ಸಾಧನೆಗೆ ಇಂತಹ ಪ್ರಶಸ್ತಿಗಳು ಮತ್ತು ಪ್ರೋತ್ಸಾಹ ಸಿಗಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೈಕ್ಲಿಂಗ್ ತರಬೇತಿದಾರರು. ನಿಲಯದ ಸಿಬ್ಬಂದಿಗಳು, ಹಲವಾರು ಕ್ರೀಡಾಪಟುಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















