ಕೇಕಿನಡಿಯ ಕಾಗದದ ವೃತ್ತದ ಮೇಲೆ
ಸುಗಂಧ ಪುಷ್ಪಗಳ ಜೋಡಿಸಿದೆನಾಗಲೆ
ನಡುವಲಿ ರಂಗಿನ ಗುಲಾಬಿಯನಿಡುತಲೆ
ಹರಿದ್ರ ವರ್ಣದ ದಳಗಳ ಸೇರಿಸುತಲೆ
ಮೂಡಿತು ಅಲ್ಲಿಯೇ ಸುಲಲಿತ ಚಿತ್ತಾರವಾಗಿ
ಪದಪುಂಜಗಳ ಪೋಣಿಸಲು ಆಯಿತು ಕಾವ್ಯವಾಗಿ
ಅರುಣೋದಯದಿ ಬರುತಿದೆ ಸುಮನಗಳಿಗಾಗಿ
ಪರಸ್ಪರ ಆಸ್ವಾದಿಸೋಣ ಜೊತೆ ಜೊತೆಯಾಗಿ
- ಲಲಿತಾ ಕೆ ಆಚಾರ್, ಬೆಂಗಳೂರು




















