ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೃಷಿ ಪತ್ತಿನ ಸಂಘದಲ್ಲಿ ಬೀಜ-ರಸಗೊಬ್ಬರ ನೀಡಿ : ಗಂಗಾಣಿ

ಅವಳಿ ತಾಲೂಕಿನಲ್ಲಿ ರಸಗೊಬ್ಬರ ಕೊರತೆ ಎದ್ದು ಕಾಣುತ್ತಿದೆ ಕೂಡಲೇ ರಸಗೊಬ್ಬರ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.

ಚಿಂಚೋಳಿ: ಕೃಷಿ ಪತ್ತಿನ
ಸಹಕಾರ ಸಂಘಗಳ ಮೂಲಕ ರೈತರಿಗೆ ಬಿತ್ತನೆ ಬೀಜ ರಸಗೊಬ್ಬರ ಮತ್ತು ಕೃಷಿ ಯಂತ್ರೋಪಕರಣಗಳು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ವೀರಣ್ಣ ಗಂಗಾಣಿ ಮನವಿ ಮಾಡಿದರು.

ಸಹಕಾರಿ ಕೃಷಿ ನಿರ್ದೇಶಕರಿಗೆ ಈ ಕುರಿತು ಮನವಿ ಸಲ್ಲಿಸಿ ಮಾತನಾಡಿದ ಅವರು ಚಿಂಚೋಳಿ ತಾಲೂಕು, ರಟಕಲ್ ಸುತ್ತ ಮುತ್ತಲಿನ ಗ್ರಾಮ, ಕಾಳಗಿ ವಲಯದಲ್ಲಿ ಬಿತ್ತನೆ ಪ್ರಾರಂಭವಾಗಿದೆ. ಆದರೆ ಸಮರ್ಪಕ ಬೀಜ ದೊರೆಯುತ್ತಿಲ್ಲ. ಆದ್ದರಿಂದ ಬೀಜ, ಗೊಬ್ಬರವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬೀಜ ವಿತರಿಸಬೇಕು ಎಂದು ಆಗ್ರಹಿಸಿದರು.

ಚಿಂಚೋಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಬೀಜ, ಗೊಬ್ಬರ ನೀಡುವಂತೆ ಆಗ್ರಹಿಸಿ ರೈತರು ಕೃಷಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ ಮಾತನಾಡಿ, ತಾಲೂಕಿನ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬೀಜ ಮಾರಾಟ ಮಾಡಿಕೊಳ್ಳಲು ಅನುಮತಿ ನೀಡುವುದಕ್ಕಾಗಿ ದಾಖಲೆ ಕೊಡಬೇಕು ತಾಲೂಕಿನಗಾರಂಪಳ್ಳಿ ಶಾದಿಪೂರ, ಚಂದನಕೇರಾ, ಸಿರೋಳ್ಳಿ ಮುಕುರಂಭಾ ಗ್ರಾಮಗಳಲ್ಲಿ 25ಕೆ.ಜಿ ಸೋಯಾಬಿನ್ ಪ್ಯಾಕೆಟ್ ನ್ನು 1420 ರೈತರಿಗೆ (ಒಟ್ಟು 140 ಕ್ವಿಂಟಲ್) ಉಚಿತವಾಗಿ ಕೊಡಲಾಗಿದೆ. ಅಲ್ಲದೆ ತುಮಕುಂಟಾ, ಇಂದ್ರಪಾಡ ಹೊಸಳ್ಳಿ, ನಿಡಗುಂದಾ, ಕಂಚನಾಳ, ಅಣವಾರ್, 2ಕೆ.ಜಿ ತೊಗರಿ ಪಾಕೆಟ್, 4 ಕೆ.ಜಿ ಹೆಸರು ಬಿತ್ತನೆ ಬೀಜ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಲೂಕಿನಲ್ಲಿ ರಸಗೊಬ್ಬರವನ್ನು ಎಂಆ‌ರ್ ಪಿ ಬೆಲೆಗೆ ಮಾರಾಟ ಮಾಡಬೇಕು ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದರೆ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಎಂದರು.

ರೈತ ಮುಖಂಡರಾದ ರುನ್ನೂರು ಮಲ್ಲಿಕಾರ್ಜುನ ಮಾತನಾಡಿ, ಕೆಲವು ಕಡೆಗಳಲ್ಲಿ ರಸಗೊಬ್ಬರ ಅಂಗಡಿಗಳಲ್ಲಿ ಬೇಕಾಬಿಟ್ಟಿ ರೈತರಿಂದ ಹಣ ವಸೂಲಿ ಮಾಡಿ ನಿಗದಿಪಡಿಸಿ ದರಕ್ಕಿಂತ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಪ್ರಮುಖರಾದ ಜರಣಪ್ಪ ಸಾಲೆಬೀರಹಳ್ಳಿ, ಚಂದ್ರಶೇಖರ ಸಾಲೇಬೀರನಳ್ಳಿ, ಸಿದ್ರಾಮಪ್ಪ ಗೋಪಾಲ ಕೆರೋಳಿ, ಮಂಜುನಾಥ ರುದ್ದೂರ್ ಗೋಪಾಲ, ಚಿತ್ರಶೇಖರ ಕೆ.ಎಂ. ಬಾರಿ, ಸಚಿನ್ ರಾಜಶೇಖರ್ ಪಾಟೀಲ್, ಅಣವಾರ್‌ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!