ಕೊಟ್ಟೂರು: ಪಟ್ಟಣದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರುಸೇನೆ ವಾಸುದೇವ ಮೇಟಿ ಬಣ (ರಿ.) ಜಿಲ್ಲಾ ಅಧ್ಯಕ್ಷರಾದ ಸಿ. ಎ. ಗಾಳೆಪ್ಪ ರವರ ಅದೇಶದ ಮೇರೆಗೆ ತಾಲೂಕು ಮಹಿಳೆ ಘಟಕದ ಅಧ್ಯಕ್ಷೆ ಸಿ ರೇಖಾ ರವರು ನೇತೃತ್ವದಲ್ಲಿ
ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕಿನ ರೈತರು ಸರಿಯಾದ ಮಳೆ ಇಲ್ಲದೆ ಕಾರಣ ರೈತರು ಭೂಮಿಯಲ್ಲಿ ಬೆಳೆಗಳಿಗೆ ಹಾಕಿದ ಬೀಜಗೊಬ್ಬರಗಳೊಂದಿಗೆ ತುಂಬಾ ಬೆಳೆಗಳು ಹಾಳಾಗಿ ಹೋಗಿವೆ. ಇದರಿಂದ ರೈತರು ಕಂಗಾಲಾಗಿ ರೈತರು ವಿಷ ಸೇವನೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಇದರಿಂದ ತಾವುಗಳು ಸರಿಯಾದ ಮಳೆ ಇಲ್ಲದ ಕಾರಣ ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕನ್ನು ಬರಗಾಲ ತಾಲೂಕು ಎಂದು ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ತಹಶೀಲ್ದಾರಾದ ಅಮರೇಶ ಜಿ.ಕೆ ರವರಿಗೆ ಸಂಘಟನೆಯ ಪದಾಧಿಕಾರಿಗಳು,ಸದಸ್ಯರು ಮನವಿ ಪತ್ರ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಕೊಟ್ಟೂರು ತಾಲೂಕು ಮಹಿಳೆ ಘಟಕದ ಅಧ್ಯಕ್ಷೆ ಸಿ ರೇಖಾ ರವರು ಮಾತನಾಡಿ ಬೆಳೆ ನಷ್ಟವಾದ ರೈತರಿಗೆ ಬೆಳೆ ಪರಿಹಾರವಾಗಿ ಒಂದು ಎಕರೆಗೆ ರೂ.30,000/-ಗಳನ್ನು ಕೂಡಲೇ ಸರ್ಕಾರ ನೀಡಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು
ಒಂದು ವೇಳೆ ಈ ಮನವಿ ಪತ್ರ ಸಲ್ಲಿಸಿದ ನಂತರವೂ ಸರ್ಕಾರ ಇದಕ್ಕೆ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸು ದೇವ ಮೇಟಿ ಬಣದ ಸಂಘಟನೆಯು ತಾಲೂಕಿನ ರೈತರಿಗೆ ಕರೆ ನೀಡಿ ಕೊಟ್ಟೂರು ಬಂದ್ ಮಾಡಲಾಗುವುದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೋಬಳಿ ಘಟಕದ ಉಪಾಧ್ಯಕ್ಷರು ಸಿದ್ದೇಶಿ. ನಾಗಪ್ಪ. ನಡುಮಾವಿನಹಳ್ಳಿ ನಾಗಮ್ಮ.ಕಮಲಮ್ಮ. ನೇತ್ರಮ್ಮ.ಸುನೀತ.ಹನುಮಕ್ಕ. ಗಂಗಮ್ಮ. ಸರ್ವ ಸದಸ್ಯರು ತಾಲೂಕಿನ ರೈತರು ಇದ್ದರು.
ವರದಿ : ಕೆ ಗೋಣೆಪ್ಪ



















