ಅಪರೂಪದಿ ಕಂಡೆ ಕಾಫಿ ಹಳದಿ ಮಿಶ್ರಪುಷ್ಪ
ತುಂಬಿಕೊಂಡೆ ಕಣ್ಣಾಲಿಗಳಲಿ ಆನಂದಭಾಷ್ಪ
ಸುಮ್ಮನೆ ಜೋಡಿಸಿದೆ ಸುಲಲಿತ ಕಟ್ಟೆಯಲಿ
ಹಸಿರ ಗರಿಗಳ ಸೇರಿಸಿದೆ ಜೊತೆಯಲಿ
ಅಲಂಕರಿಸಿದೆ ಪುಟ್ಟ ಶ್ವೇತತುಂಬೆ ಹೂಗಳಲಿ
ಏರಿಸಿದೆ ಕೇಸರಿ ಹೂವೊಂದನು ಮುಡಿಯಲಿ
ಕೆಂಪು ಬೊಟ್ಟಿನ ಪುಷ್ಪಗಳ ಸುತ್ತ ಹರಡಲು
ಸುಪ್ರಭಾತದಿ ಹೊಮ್ಮಿತೊಂದು ಕಾವ್ಯಚಿತ್ತಾರದ ಹೊನಲು
- ಲಲಿತಾ ಕೆ ಆಚಾರ್, ಬೆಂಗಳೂರು




















