ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸೋಮವಾರಪೇಟೆಯ ಇಂದಿರಾ ಕ್ಯಾಂಟೀನ್ ನಲ್ಲಿ ಅಕ್ರಮ : ಕರವೇ ಘೇರಾವ್ ಬಳಿಕ ತಪ್ಪೊಪ್ಪಿಕೊಂಡ ಕ್ಯಾಂಟೀನ್ ನಿರ್ವಾಹಕ

ಸೋಮವಾರಪೇಟೆ: ಬಡವರ ಪಾಲಿಗೆ ವರವಾಗಬೇಕಿದ್ದ ಇಂದಿರಾ ಕ್ಯಾಂಟೀನ್ ಬೆಳಗಿನ ತಿಂಡಿ ಮದ್ಯಾಹ್ನದ ಊಟ ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರ ಪಾಲಾಗುತ್ತಿದ್ದನ್ನು ಖಂಡಿಸಿ ಅಲ್ಲಿನ ನಿರ್ವಾಹಕರಿಗೆ ಹಿಂದೆ ಹಾಗೆ ಮಾಡದಂತೆ ತಾಕಿತ್ತು ಮಾಡಲಾಗಿತ್ತು ,ಆದರೆ ಕದ್ದು ಮುಚ್ಚಿ ಹಳೆ ಚಾಳಿ ಮುಂದುವರಿಸಿದ ಬೆನ್ನಲ್ಲೇ ಸೋಮವಾರಪೇಟೆ ಕರ್ನಾಟಕ ರಕ್ಷಣಾ ವೇದಿಕೆಯ ತಂಡ ಅಲ್ಲಿನ ಅಧ್ಯಕ್ಷ ಸಂತೋಷ್ ಅವರ ನೇತೃತ್ವದಲ್ಲಿ ಕಾದು ಕುಳಿತು ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಪಾರ್ಸಲ್ ಕಳಿಸಲು ಸಿದ್ದವಾಗಿದ್ದಾಗ ಸಾಕ್ಷಿ ಸಮೇತ ಹಿಡಿದು ಕೆಲ ಕ್ಷಣ ಪಾರ್ಸಲ್ ಕಳಿಸಿದಂತೆ ದಿಗ್ಬಂದನ ಹಾಕಲಾಯಿತು.

ಇಲ್ಲಿನ ಇಂದಿರಾ ಕ್ಯಾಂಟೀನ್ ಪ್ರತಿದಿನ ಸರ್ಕಾರಿ ನೌಕರರಿಗೆ ಅವರ ಕಚೇರಿಗೆ ೫ರಿಂದ ೧೦ ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ಪಾರ್ಸಲ್ ಕಳಿಸುತ್ತಿದ್ದು, ಅಲ್ಲಿನ ಬೀದಿ ವ್ಯಾಪಾರಿಗಳು, ಬೀದಿ ಸ್ವಚ್ಛ ಮಾಡುವವರು, ಟ್ಯಾಕ್ಸಿ ಡ್ರೈವರ್ ಗಳು ಪೇಟೆಗೆ ಬ್ಯಾಂಕ್ ವ್ಯವಹಾರಕ್ಕೆ ಬಂದ ರೈತರು ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದರು.
ಈ ಬಗ್ಗೆ ಕೆಲ ಕಾಲದ ನಂತರ ತಪ್ಪು ಒಪ್ಪಿಕೊಂಡ ಅಲ್ಲಿನ ನಿರ್ವಾಹಕರಿಗೆ ಕರವೇ ಬುದ್ಧಿ ಹೇಳಿ ಇನ್ನು ಮುಂದೆ ಪಾರ್ಸೆಲ್ ಕಳಿಸಿ ಕೂಡದು ಈ ಕ್ಯಾಂಟೀನ್ ನಲ್ಲಿ ಖುದ್ದಾಗಿ ಬಂದು ಊಟ ಮಾಡುವವರಿಗೆ ಮಾತ್ರ ಊಟ ಬಡಿಸಬೇಕು ಊಟ ತಿಂಡಿಯನ್ನು ಶುಚಿಯಾಗಿ ಹಾಗೂ ರುಚಿಯಾಗಿ ಮಾಡಬೇಕು ಕಡ್ಡಾಯವಾಗಿ ಸರ್ಕಾರದ ನಿರ್ದೇಶನವನ್ನು ಪಾಲಿಸಬೇಕೆಂದು ಷರತ್ತು ವಿಧಿಸಿ ಕ್ಯಾಂಟೀನ್ ಅನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು.
ಈ ಸಂದರ್ಭ ಕರವೇಯ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ನಾಗರಾಜ್, ಬೋಪಯ್ಯ, ಜಗದೀಶ್, ದೀಪಕ್, ತಮ್ಮಯ್ಯ, ಹರ್ಷಿತ್ ಸಂದೀಪ್ ತಿಮ್ಮಯ್ಯ ಹಾಜರಿದ್ದರು.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!