ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ದಳವಾಯಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೇಡಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕಾ ಸ್ಪರ್ಧೆಯನ್ನು ಮಡಿಲು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು ಹಾಗೂ ನೆಸ್ಲೆ ಇಂಡಿಯಾ ಲಿಮಿಟೆಡ್ ನಂಜನಗೂಡು ಸಹಯೋಗದೊಂದಿಗೆ ಏರ್ಪಡಿಸಲಾಗಿತ್ತು.
ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇವರಿಗೆ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಶ್ರೀನಿವಾಸ್ ಅವರು ಸಮಾರಂಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿ ದೇಶ ವಿದೇಶಗಳಲ್ಲಿ ಗಣಪತಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ, ಗಣೇಶನ ತಯಾರಿಗೆ ಕೈಯಲ್ಲಿ ರಾಸಾಯನಿಕ ವಸ್ತುಗಳನ್ನು ಬಳಸಿ ಪರಿಸರ ಹಾನಿಗೆ ಕಾರಣರಾಗುತ್ತಿದ್ದಾರೆ ಹಾಗೂ ಧ್ವನಿವರ್ಧಕಗಳನ್ನು ಬಳಸಿ, ಪಟಾಕಿಗಳನ್ನು ಸಿಡಿಸುತ್ತಿದ್ದಾರೆ ಇವುಗಳಿಂದ ಪರಿಸರ ಮಾಲಿನ್ಯ ವಾಯುಮಾಲಿನ್ಯ ಸೇರಿದಂತೆ ಶಬ್ದ ಮಾಲಿನ್ಯವೂ ಸಹ ಉಂಟಾಗುತ್ತಿದೆ.
ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ಕರಗದ ರಾಸಾಯನಿಕಗಳು ಜಲಚರ ಪ್ರಾಣಿಗಳ ಮೇಲೆ ಹಾನಿಯನ್ನು ಉಂಟು ಮಾಡುತ್ತಿವೆ.
ಈ ಆಚರಣೆಗಳು ಪ್ರಕೃತಿಗೆ ಪ್ರಿಯವಾಗಿರಲಿ ಎಂದು ಜಾಗೃತಿ ಮೂಡಿಸಿದರು. ನೈಸರ್ಗಿಕ ಪ್ರಿಯ ಗಣೇಶಗಳನ್ನು ಆರಾಧಿಸಿ ದೇವರಿಗೆ ಪ್ರಿಯವಾಗಿ ಬದಲಾಗೋಣ ಎಂದರು.
ನಂತರ ಮುಖ್ಯ ಶಿಕ್ಷಕರಾದ ನಾಗೇಶ್ ನಾಯಕ್ ಅವರು ಕೂಡ ನೈಸರ್ಗಿಕ ಗಣೇಶ ಮೂರ್ತಿಯನ್ನು ಉದ್ದೇಶಿಸಿ ಮಕ್ಕಳನ್ನು ಶಿಕ್ಷಕರನ್ನು ಕುರಿತು ಮಾತನಾಡಿದರು ನಂತರ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು. ಜಯಶೀಲರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಈ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳು ಶಿಕ್ಷಕ ವರ್ಗ ಹಾಜರಿದ್ದರು.




















