
ಶ್ರೀ ಹರಿಹರ ಜಡೆ ಮುನೇಶ್ವರ ಸ್ವಾಮಿ ಮತ್ತು ಶ್ರೀ ಉಮಾಮಹೇಶ್ವರಿ ದೇವಿಯ ಸುಕ್ಷೇತ್ರ ಆವರಣದಲ್ಲಿ ದೇವಾಲಯದ 14ನೇ ವರ್ಷದ ಬ್ರಹ್ಮರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ವಿವಿಧ ಜಾನಪದ ಕಲಾತಂಡಗಳು ಮತ್ತು ಅಲಂಕೃತ ದೇವರುಗಳ ಮೆರವಣಿಗೆಯೊಂದಿಗೆ ಪ್ರಧಾನ ಅರ್ಚಕರು ಈ ರಥೋತ್ಸವಕ್ಕೆ ಚಾಲನೆ ನೀಡಿದರು.

ಸಿರಾ ತಾಲ್ಲೂಕಿನ ಬ್ರಹ್ಮಸಂದ್ರ ಗೊಲ್ಲರಟ್ಟಿಯ ಶ್ರೀ ಹರಿಹರ ಜಡೆ ಮುನೇಶ್ವರ ಸ್ವಾಮಿ ಮತ್ತು ಶೀ ಉಮಾ ಮಹೇಶ್ವರಿ ದೇವಿಯ ಅರ್ಚಕರು ಮತ್ತು ಗ್ರಾಮಸ್ಥರು ಆಯೋಜಿಸಿದ್ದ ಬ್ರಹ್ಮರಥೋತ್ಸವದಲ್ಲಿ, ಶ್ರೀ ಓಬಳ ನರಸಿಂಹ ಸ್ವಾಮಿ, ಕಡಗದ ಕರಿಯಮ್ಮ ದೇವಿ, ಗೊಲ್ಲರಟ್ಟಿ ಮಣ್ಣಮ್ಮ ದೇವಿ, ಮಾದಾಪುರದಮ್ಮ ದೇವಿ, ಸೀತಾರಾಮ ,ಲಕ್ಷ್ಮಣ ಆಂಜನೇಯ ಸ್ವಾಮಿ, ಹಾಲು ದೊಡ್ಡೇರಿ ದೇವರುಗಳ ಜೊತೆ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಬಳಿಕ ಅಲಂಕೃತ ದೇವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಜಯಘೋಷಗಳೊಂದಿಗೆ ರಥವು ವೀರಗಾಸೆ, ವಿವಿಧ ಜಾನಪದ ಕಲಾತಂಡಗಳು, ವಿದ್ಯುತ್ ದೀಪ ಅಲಂಕಾರ ಅಲಂಕೃತ ದೇವಾಲಯ ಗಮನ ಸೆಳೆದವು.
ನೆರದ ಸಹಸ್ರಾರು ಮಂದಿ ಭಕ್ತರು ಸರ್ವಾಲಂಕೃತ ರಥವನ್ನು ದೇಗುಲದವರೆಗೂ ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು. ಶ್ರೀಜಡೆ ಮುನೇಶ್ವರಸ್ವಾಮಿಗೆ ಮತ್ತು ಶ್ರೀಉಮಾಮಹೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಿರಾ ತಾಲೂಕಿನ ಸುತ್ತಮುತ್ತ ಮಾತ್ರವಲ್ಲದೇ ತುಮಕೂರು, ದೊಡ್ಡಬಳ್ಳಾಪುರ, ರತ್ನಗಿರಿ ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಿಂದ ಸಹಸ್ರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು. ಹರಕೆ ಹೊತ್ತ ಭಕ್ತರು ಬಂದೋಬಸ್ತ್‌ಗಾಗಿ .ಪೊಲೀಸರನ್ನು ನಿಯೋಜಿಸಲಾಗಿತ್ತು. ತಿಂಡಿ, ತಿನಿಸು, ಆಟಿಕೆ ವಸ್ತುಗಳ ಮಾರಾಟ ಭರದಿಂದ ಸಾಗಿತು.
ಭಕ್ತಾದಿಗಳ ಹರಕೆ ಹಾಗೂ ಭಕ್ತಿಭಾವ ಮಾತುಗಳು :
ಸುಕ್ಷೇತ್ರ ಉಮಾಮಹೇಶ್ವರಿ ದೇವಿಯ ಪವಾಡದಿಂದ ನಮ್ಮೆಲ್ಲ ಕಷ್ಟ ದೂರವಾಗಿ ಬೇಡಿದ ವರವನ್ನು ನೀಡುವ ತಾಯಿಯಾಗಿದ್ದಾರೆ. ಸ್ವಾಮಿಯ ಕೃಪಾಕಟಾಕ್ಷದಿಂದ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾಗಿ ಕಂಕಣ ಭಾಗ್ಯ ಸಂತಾನ ಭಾಗ್ಯ ಹಾಗೂ ಜಮೀನು ನಿವೇಶನಗಳ ಕೊಳ್ಳುವ ಭಾಗ್ಯವು ಸ್ವಾಮಿ ಬರುವ ಭಕ್ತರಿಗೆ ಕರುಣಿಸಿದ್ದಾನೆ ಎಂದು ಭಕ್ತರು ಸ್ವಾಮಿ ಕೃಪೆಗೆ ಪಾತ್ರರಾಗಿದ್ದಾವೆ ಎಂದು ತಿಳಿಸಿದರು.
ಅನ್ನದಾನದ ಸೇವೆ :
ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಹರಕೆ ಹೊತ್ತರೆ ಮನೋರಥಗಳು ಈಡೇರುತ್ತವೆ ಎಂಬ ನಂಬಿಕೆ ಜನಮಾನಸದಲ್ಲಿ ಬೇರೂರಿದ್ದು ದೇವಾಲಯದ ಅಕ್ಕ ಪಕ್ಕ ಹರಕೆ ಹೊತ್ತ ಭಕ್ತಾಧಿಗಳು ಮತ್ತು ದೇವಾಲಯದ ಆಡಳಿತ ಮಂಡಳಿವರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತಾಧಿಗಳಿಗೆ ನೀರು ಮತ್ತು ಅನ್ನದಾನದ ವ್ಯವಸ್ಥೆ ಮಾಡಿ ಹಸಿದ ಹೊಟ್ಟೆಗಳಿಗೆ ಅನ್ನ ನೀಡಿದ ಸತ್ಕಾರ್ಯಕ್ಕೆ ಪಾತ್ರರಾದರು.
ನೂತನ ರಥೋತ್ಸವ ಅಂಗವಾಗಿ ಶ್ರೀ ಹರಿಹರ ಜಡೆ ಮುನೇಶ್ವರ ಸ್ವಾಮಿ ಹಾಗೂ ಉಮಾಮಹೇಶ್ವರಿ ದೇವಿಯ ಸಮಸ್ತ ಭಕ್ತಾದಿಗಳು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸಕಾಲಕ್ಕೆ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾದರು.
ವರದಿ. ಪ್ರಸನ್ನ ಕುಮಾರ್ . ಎಸ್. ಕೊರಟಗೆರೆ.




















