ಬಿ.ಇಡಿ. ಪರೀಕ್ಷೆಯಲ್ಲಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಾಧನೆ
ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ಗಳಲ್ಲಿ ಶೇ.100 ಫಲಿತಾಂಶ; ವಿದ್ಯಾರ್ಥಿಗಳ ಗಮನಾರ್ಹ ಸಾಧನೆ
ಬೀದರ: ನಗರದ ಹೈ.ಕ.ಶಿ. ಸಂಸ್ಥೆಯ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯ, ಬೀದರ ಜುಲೈ 2026ರಲ್ಲಿ ನಡೆದ ಬೀದರ್ ವಿಶ್ವವಿದ್ಯಾಲಯ, ಬೀದರನ ಬಿ.ಇಡಿ. ಪ್ರಥಮ ಹಾಗೂ ತೃತೀಯ ಸೆಮಿಸ್ಟರ್ ಪರೀಕ್ಷೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದ್ದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಚ. ಕನಕಟ್ಟೆ ತಿಳಿಸಿದ್ದಾರೆ.
ಪ್ರಥಮ ಸೆಮಿಸ್ಟರ್ನಲ್ಲಿ ಸೈದಾ ಉಜ್ಮಾ ಶೇ.89.7 ಅಂಕಗಳೊಂದಿಗೆ ಪ್ರಥಮ,
ಪ್ರತೀಕ್ಷಾ ಶೇ.85.5 ಅಂಕಗಳೊಂದಿಗೆ ದ್ವಿತೀಯ, ನಂದಿನಿ ಶೇ.84.7 ಅಂಕಗಳೊಂದಿಗೆ ತೃತೀಯ ಸ್ಥಾನ, ನವೀತಾ ನರಸಿಮ್ಲು ಶೇ.83.8 ಅಂಕಗಳೊಂದಿಗೆ ನಾಲ್ಕನೇ ಹಾಗೂ ರೇಷ್ಮಾ ಶೇ.83.7 ಅಂಕಗಳೊಂದಿಗೆ ಐದನೇ ಸ್ಥಾನ ಗಳಿಸಿದ್ದಾರೆ.
ತೃತೀಯ ಸೆಮಿಸ್ಟರ್ನಲ್ಲಿ ಪ್ರೀಯಾಂಕಾ ಶೇ.88 ಅಂಕಗಳೊಂದಿಗೆ ಪ್ರಥಮ, ರಾಜಕುಮಾರ ಶೇ.87.5 ದ್ವಿತೀಯ, ಬಸವರತ್ನ ಶೇ.87 ಅಂಕಗಳೊಂದಿಗೆ ತೃತೀಯ, ಗುರುಕಿರಣ ಹಾಗೂ ಅನುಪಮಾ ತಲಾ ಶೇ.86.8 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಮತ್ತು ವಿಜಯಲಕ್ಷ್ಮೀ ಶೇ.86.5 ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಹೈ.ಕ.ಶಿ. ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಬಿವಿಬಿ ಆವರಣದ ಸಂಚಾಲಕರಾದ ಡಾ. ರಜನೀಶ ವಾಲಿ ಅಭಿನಂದಿಸಿ ಶುಭ ಹಾರೈಸಿದ್ದಾರೆ. ಪ್ರಾಚಾರ್ಯರು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















