ಚಿತ್ರದುರ್ಗ:ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅರ್ಜುನ ಆನೆಯ ಸ್ಪರಣಾರ್ಥ ದುರ್ಗಾ ಇಲೆವೆನ್ ಕ್ರಿಕೆಟರ್ಸ್ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಅರ್ಜುನ ಕಪ್ 2023 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗಿದೆ ಡಿಸೆಂಬರ್ 20 ರಿಂದ 24ರ ವರೆಗೆ ಲೀಗ್ ಕಪ್ ಟೂರ್ನಿ ನಡೆಯಲಿದೆ ನಗರಸಭೆಯ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಿಂದ 35 ತಂಡಗಳ ಭಾಗವಹಿಸಲಿವೆ.ಉತ್ತಮ ಬ್ಯಾಟರ್ ಉತ್ತಮ ಬೌಲರ್ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ವಿತರಿಸಲಾಗುತ್ತದೆ.ಪ್ರಥಮ ಬಹುಮಾನ 2 ಲಕ್ಷ ನಗದು ಜೊತೆಗೆ ಅರ್ಜುನ ಟ್ರೋಫಿ
ದ್ವಿತೀಯ ಬಹುಮಾನ ಒಂದು ಲಕ್ಷ ಜೊತೆಗೆ ಬಲರಾಮನ ಟ್ರೋಫಿ ಮೂರನೇ ಬಹುಮಾನ 50,000 ನಗದು ಹಾಗೂ ದ್ರೋಣ ಟ್ರೋಫಿ ನೀಡಲಾಗುವುದು.ಉದ್ಯಮಿ ಸುರೇಶ್ ಬಾಬು. ಗೋಪಾಲಸ್ವಾಮಿ ನಾಯಕ್,ಪರಮೇಶ್,ಸಿದ್ದೇಶ್ ಇದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.