ಆಸರೆಯಿಲ್ಲದ ಪ್ರಾಣಿಯ ರಕ್ಷಿಸೋರು ಯಾರು
ಮಾನವನು ಎಲ್ಲಾ ಇದ್ದು ಅನಾಥರು
ಶವಕ್ಕೆ ಸಂಸ್ಕಾರ ಇರದ ಬದುಕು
ಕೋಟಿ ಒಡೆಯನಾದರು ಆರಡಿ,ಮೂರಡಿ ಸಾಕು.I೧I
ಕೂಡು ಒಗ್ಗಟ್ಟಲ್ಲಿ ನಾವೇ ಉತ್ತಮರು
ಸ್ವಾರ್ಥವೇ ನಿಯಮವೂ ಅನ್ನುವಂತೆ ಬಾಳುವರು
ಹಂಚಿ ತಿನ್ನುವುದು ಇವರ ಸಂಪ್ರದಾಯ
ತಾನು ಅನ್ನೋ ಅಸ್ತ್ರವೇ ಅಭಯ.I೨I
✍🏻ದೇವರಾಜು ಬಿ ಎಸ್ ಹೊಸಹೊಳಲು
ಕಾವ್ಯನಾಮ:ಅರಸು