ಚಿತ್ರದುರ್ಗ:ಫೆಬ್ರವರಿ 2 ರಿಂದ 4 ರವರೆಗೆ ಫಲ ಪುಷ್ಪ ಪ್ರದರ್ಶನವನ್ನು ತೋಟಗಾರಿಕೆ ಕಛೇರಿಯಲ್ಲಿ ಆಯೋಜಿಸಲಾಗಿದೆ.ಫೆ.2 ರಂದು ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಫಲ ಪುಷ್ಪ ಪ್ರದರ್ಶನ ಉದ್ಘಾಟಿಸಲಿದ್ದಾರೆ.ಪ್ರದರ್ಶನಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ,ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಲಾಗಿದೆ.ಸ್ತ್ರೀಶಕ್ತಿ ಸಂಘಗಳ ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ.
ಭಾರತ ಸಂವಿಧಾನ,ಚಂದ್ರಯಾನ ಅಂಗಳದಲ್ಲಿ ಲ್ಯಾಂಡರ್ ವಿಕ್ರಂ ಮತ್ತು ರೋವರ್ ಪ್ರಗ್ಯಾನ್ , ಚಂದ್ರಯಾನ 3 ಪ್ರದರ್ಶನಗೊಳ್ಳಲಿದೆ.ಜ್ಞಾನಪೀಠ ಪುರಸ್ಕೃತರು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮಹನೀಯರು ಹಣ್ಣು ಮತ್ತು ತರಕಾರಿಯಲ್ಲಿ ಅರಳಲಿದ್ದಾರೆ.
ನೀರು ಕೊಯ್ಲು ಘಟಕಗಳು,ಗೋಪಾಲಸ್ವಾಮಿ ಹೊಂಡ,ಅಕ್ಕ ತಂಗಿ ಹೊಂಡ ಮತ್ತು ಸಿಹಿ ನೀರು ಹೊಂಡ ಮಾದರಿಗಳು ಪ್ರದರ್ಶನಗೊಳ್ಳಲಿವೆ ಎಂದು
ಬುಧುವಾರ ಜಿಲ್ಲಾ ಪಂಚಾಯತ್ ಸಿಇಒ ಜೆ. ಸೋಮಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಲಾ ಮಕ್ಕಳಿಗೆ ಜಾನಪದ ಹಾಗೂ ಭಾವಗೀತೆ, ಚಿತ್ರಕಲೆ ಪ್ರಬಂಧ ಸ್ಪರ್ಧೆ,ಹಣ್ಣು ಮತ್ತು ತಯಾರಿಕೆಗಳನ್ನು ಬಳಸಿ ಫ್ಯಾನ್ಸಿ ಡ್ರೆಸ್,ರಂಗೋಲಿ , ಹಣ್ಣು ಮತ್ತು ತರಕಾರಿಗಳನ್ನು ಗುರುತಿಸುವ ಸ್ಪರ್ಧೆ, ಏರ್ಪಡಿಸಲಾಗಿದೆ.ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು .
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ ಸವಿತಾ ,ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ ದೇವರಾಜ್,ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ನಾಗರಾಜ್ ಬೇಂದ್ರೆ ಇದ್ದರು.




















